1ರೂ. ಗೆ 1ಜಿಬಿ ಡಾಟಾ : ಬಿಎಸ್‌ಎನ್‌ಎಲ್ ನಿಂದ ಭರ್ಜರಿ ಆಫರ್

ಈ ಸುದ್ದಿಯನ್ನು ಶೇರ್ ಮಾಡಿ

BSNL-01

ನವದೆಹಲಿ. ಸೆ. 03 : ರಿಲಾಯನ್ಸ್ ಜಿಯೋ ಟೆಲಿಕಾಂ ಜಗತ್ತಿನಲ್ಲಿ ಇತಿಹಾಸ ಸೃಷ್ಟಿಸಲು ಮುಂದಾಗಿರುವುದರಿಂದ ಇತರ್ ಟೆಲಿಕಾ ಸಂಸ್ಥೆಗಳು ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ. ಸದರಲ್ಲೂ ಸರ್ಕಾರಿ ಸ್ವಾಮ್ಯದ ಸಂಸ್ಥೆ ಬಿಎಸ್‌ಎನ್‌ಎಲ್ ಇತರ ಟೆಲಿಕಾಂ ಸಂಸ್ಥೆಗಳಿಗಿಂತ ಮೊದಲು ತನ್ನ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ. ರಿಲಾಯನ್ಸ್ ಜಿಯೋ ಭಾರೀ ಆಫರ್ ನೀಡುವ ಮೂಲಕ ಮೊಬೈಲ್ ಗ್ರಾಹಕರನ್ನು ಸೆಳೆಯುತ್ತಿರುವುದರಿಂದ ಇತರೆ ಟೆಲಿಕಾಂ ಕಂಪನಿಗಳು ಅದಕ್ಕೆ ಸ್ಪರ್ಧೆಯೊಡ್ಡಲು ತಯಾರಿ ನಡೆಸುತ್ತಿವೆ.
ಗ್ರಾಹಕರು ಪೋರ್ಟಿಂಗ್ ಮೂಲಕ ರಿಲಾಯನ್ಸ್ ಜಿಯೋ ಗೆ ತೆರಳದಂತೆ ಮಾಡಲು ಕಸರತ್ತು ಮಾಡುತ್ತಿರುವ ಕಂಪನಿಗಳು, ಅಂತಹ ಗ್ರಾಹಕರಿಗೆ ರಿಯಾಯಿತಿ ದರ ನೀಡುವ ಮೂಲಕ ಮನವೊಲಿಸಲು ಯತ್ನಿಸುತ್ತಿವೆ.

ಇದೀಗ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ತನ್ನ ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ಭಾರೀ ಆಫರ್ ಘೋಷಿಸಿದ್ದು, ಕೇವಲ 249 ರೂಪಾಯಿಗಳಿಗೆ ಅನಿಯಮಿತ ಡೇಟಾ ಸೌಲಭ್ಯ ನೀಡುವುದಾಗಿ ಹೇಳಿದೆ. ‘Experience Unlimited BB 249’ ಹೆಸರಿನ ಈ ಪ್ಲಾನ್ ಸೆಪ್ಟೆಂಬರ್ 9 ರಿಂದ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ. ಮಾಸಿಕ 300 ಜಿಬಿ ವರೆಗೆ ಡೇಟಾ ಬಳಸುವ ಗ್ರಾಹಕರಿಗೆ ಈ ಕೊಡುಗೆಯಿಂದಾಗಿ ಪ್ರತಿ ಜಿಬಿ ಗೆ 1 ರೂ.ಗಳಿಗಿಂತಲೂ ಕಡಿಮೆ ವೆಚ್ಚ ತಗುಲಲಿದೆ. 2 ಎಂಬಿಪಿಎಸ್ ವೇಗದಲ್ಲಿ ಡೇಟಾ ದೊರೆಯಲಿದೆ ಎನ್ನಲಾಗಿದ್ದು, ಮೊಬೈಲ್ ಬಳಕೆದಾರರ ಕರೆ ದರಗಳಲ್ಲೂ ಬಿಎಸ್‌ಎನ್‌ಎಲ್ ಕಡಿತಗೊಳಿಸುವ ನಿರೀಕ್ಷೆಯಿದೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin