1 ಕೋಟಿ ಡೀಲ್ ಪ್ರಕರಣ : ಏಜೆಂಟ್ ಸೆರೆ, ನಾಪತ್ತೆಯಾಗಿರುವ ಪೊಲೀಸರಿಗೆ ಶೋಧ

ಈ ಸುದ್ದಿಯನ್ನು ಶೇರ್ ಮಾಡಿ

Arreste--TV

ಬೆಂಗಳೂರು, ಡಿ.2- ನಗರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ವೈಟ್ ಅಂಡ್ ಬ್ಲಾಕ್ ದಂಧೆಯ ಬೆನ್ನು ಹತ್ತಿರುವ ಹೈಗ್ರೌಂಡ್ಸ್ ಪೆÇಲೀಸರು ದಂಧೆಯ ಪ್ರಮುಖ ಏಜೆಂಟ್ ಒಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತ ಏಜೆಂಟ್ ಯಲಹಂಕದ ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ ರಾಜು (39) ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ. ವ್ಯಕ್ತಿಯೊಬ್ಬರಿಂದ ಸಿಸಿಬಿ ಪೊಲೀಸರು ಒಂದು ಕೋಟಿ ಹಳೆ ನೋಟು ಲೂಟಿ ಹೊಡೆದ ಪ್ರಕರಣದ ತನಿಖೆ ನಡೆಸುತ್ತಿರುವ ಹೈಗ್ರೌಂಡ್ಸ್ ಪೊಲೀಸರು ವೈಟ್ ಅಂಡ್ ಬ್ಲಾಕ್ ದಂಧೆಯಲ್ಲಿ ಏಜೆಂಟ್ ಆಗಿ ಗುರುತಿಸಿಕೊಂಡಿದ್ದ ರಮೇಶ್ ರಾಜುನನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಸುಬಾನ್ ಎಂಬುವರ ಬಳಿಯಿದ್ದ ಹಳೆ ನೋಟುಗಳನ್ನು ತನ್ನ ಪರಿಚಯಸ್ಥರಿಂದ ಹೊಸ ನೋಟಿಗೆ ಬದಲಾಯಿಸಿಕೊಡುವುದಾಗಿ ರಮೇಶ್ ರಾಜು ನಂಬಿಸಿ ವ್ಯವಹಾರ ನಡೆಸಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ವೈಟ್ ಅಂಡ್ ಬ್ಲಾಕ್ ದಂಧೆಯ ತನಿಖೆ ತೀವ್ರಗೊಳಿಸಿರುವ ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತ ನೇತೃತ್ವದ ತಂಡ ಲೂಟಿ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮೂವರು ಪೊಲೀಸರ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದೆ.

ಕೋಟಿ ಲೂಟಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾಗಿರುವ ಎಎಸ್‍ಐ ಹೊಂಬಾಳೆಗೌಡ, ಹೆಡ್‍ಕಾನ್ಸ್‍ಟೆಬಲ್‍ಗಳಾದ ನರಸಿಂಹಮೂರ್ತಿ ಮತ್ತು ಗಂಗಾಧರ್ ಎಂಬುವರನ್ನು ಈಗಾಗಲೇ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈಗ ಈ ಮೂವರು ತಲೆಮರೆಸಿಕೊಂಡಿದ್ದಾರೆ.

ಸಿಸಿಬಿ ಜಫ್ತಿ ಮಾಡಿದ್ದ 15 ಕೋಟಿ ರೂ. ಹಣದಲ್ಲಿ 1.60 ಕೋಟಿ ರೂ. ಮಾಯ

ಬೆಂಗಳೂರು, ಡಿ.2- ವೈಟ್ ಅಂಡ್ ಬ್ಲಾಕ್ ದಂಧೆಯಿಂದ ಸಿಸಿಬಿ ಸಿಸಿಬಿ ಜಫ್ತಿ ಮಾಡಿದ್ದ 15 ಕೋಟಿ ರೂ. ಹಣದಲ್ಲಿ 1.60 ಕೋಟಿ ರೂ. ಮಾಯಲೀಸರು ಜಫ್ತಿ ಮಾಡಿದ್ದ 15 ಕೋಟಿ ರೂ. ಹಣದಲ್ಲಿ ನಾಪತ್ತೆಯಾಗಿರುವುದು ಬರೋಬ್ಬರಿ 1.60 ಕೋಟಿ ರೂ. ಎಂದು ಹಿರಿಯ ಸಿಸಿಬಿ ಜಫ್ತಿ ಮಾಡಿದ್ದ 15 ಕೋಟಿ ರೂ. ಹಣದಲ್ಲಿ 1.60 ಕೋಟಿ ರೂ. ಮಾಯಲೀಸ್ ಅಧಿಕಾರಿಯೊಬ್ಬರು ಈ ಸಂಜೆಗೆ ಸ್ಪಷ್ಟಪಡಿಸಿದ್ದಾರೆ. ಕೋಟಿ ಲೂಟಿ ಪ್ರಕರಣದಲ್ಲಿ ಸಿಸಿಬಿ ಜಫ್ತಿ ಮಾಡಿದ್ದ 15 ಕೋಟಿ ರೂ. ಹಣದಲ್ಲಿ 1.60 ಕೋಟಿ ರೂ. ಮಾಯಲೀಸರು ಶಾಮೀಲಾಗಿರುವುದು ಬಯಲಾಗುತ್ತಿದ್ದಂತೆ ಆಯುಕ್ತ ಸುನಿಲ್‍ಕುಮಾರ್ ಅವರು ಸಿಸಿಬಿ ಜಫ್ತಿ ಮಾಡಿದ್ದ 15 ಕೋಟಿ ರೂ. ಹಣದಲ್ಲಿ 1.60 ಕೋಟಿ ರೂ. ಮಾಯಲೀಸ್ ವಶದಲ್ಲಿರುವ ಜಫ್ತಿ ಹಣವನ್ನು ಎಣಿಕೆ ಮಾಡುವಂತೆ ಸಿಸಿಬಿ ಅಧಿಕಾರಿಗಳಿಗೆ ಸೂಚಿಸಿದ್ದರು.

ಆಯುಕ್ತರ ಸೂಚನೆ ಮೇರೆಗೆ ಜಂಟಿ ಆಯುಕ್ತರು ಮತ್ತು ಡಿಸಿಪಿಯವರು ಸಿಸಿಬಿ ಇನ್ಸ್‍ಪೆಕ್ಟರ್ ವಶದಲ್ಲಿದ್ದ 15 ಕೋಟಿ ಹಳೆ ನೋಟುಗಳನ್ನು ಮರು ಎಣಿಕೆ ಮಾಡಿದಾಗ ಆ ಹಣದಲ್ಲಿ 1.60 ಕೋಟಿ ರೂ. ನಾಪತ್ತೆಯಾಗಿರುವುದು ಬಯಲಾಗಿದೆ. ಹಣ ನಾಪತ್ತೆ ಕುರಿತಂತೆ ನನಗೇನೂ ತಿಳಿದಿಲ್ಲ ಎಂದು ಜಫ್ತಿ ಹಣದ ಉಸ್ತುವಾರಿ ವಹಿಸಿದ್ದ ಇನ್ಸ್‍ಪೆಕ್ಟರ್ ತಿಳಿಸಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಸಿಸಿಬಿ ಜಫ್ತಿ ಮಾಡಿದ್ದ 15 ಕೋಟಿ ರೂ. ಹಣದಲ್ಲಿ 1.60 ಕೋಟಿ ರೂ. ಮಾಯಲೀಸ್ ವಶದಲ್ಲಿರುವ ಹಣವೇ ಕಳುವಾಗಿರುವುದು ಸಿಸಿಬಿ ಜಫ್ತಿ ಮಾಡಿದ್ದ 15 ಕೋಟಿ ರೂ. ಹಣದಲ್ಲಿ 1.60 ಕೋಟಿ ರೂ. ಮಾಯಲೀಸ್ ಇಲಾಖೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಯುಕ್ತ ಸುನಿಲ್‍ಕುಮಾರ್ ಅವರು ಇಡೀ ಪ್ರಕರಣವನ್ನು ಸೂಕ್ಷ್ಮವಾಗಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Facebook Comments

Sri Raghav

Admin