1-0 ಅಂತರದಲ್ಲಿ ಟಿ-20 ಸರಣಿ ತನ್ನದಾಗಿಸಿಕೊಂಡ ವಿಂಡೀಸ್

ಈ ಸುದ್ದಿಯನ್ನು ಶೇರ್ ಮಾಡಿ

ind-west

ಲಾಡರ್ ಹಿಲ್ ಆ.29 : ಮೊದಲ ಟಿ-20 ಪಂದ್ಯದಲ್ಲಿ ಸೋತಿದ್ದ ಸೇಡನ್ನು, ಎರಡನೇ ಪಂದ್ಯದಲ್ಲಿ ತೀರಿಸಿಕೊಂಡು, ಸರಣಿಯನ್ನು ಸಮಬಲ ಮಾಡಿಕೊಳ್ಳಬೇಕೆಂಬ ಟೀಂ ಇಂಡಿಯಾ ಕನಸು ಭಗ್ನವಾಗಿದೆ. ಅಮೆರಿಕದಲ್ಲಿ ಇದೇ ಮೊದಲ ಬಾರಿಗೆ ಆಯೋಜನೆಗೊಂಡಿದ್ದ ಟಿ-20 ಕ್ರಿಕೆಟ್ ಸರಣಿಯನ್ನು ವಿಂಡೀಸ್, 1-0 ಅಂತರದಲ್ಲಿ ಜಯಗಳಿಸಿದೆ. 2 ನೇ ಟಿ-20 ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಮೊದಲ ಪಂದ್ಯದಲ್ಲಿ 1 ರನ್ ಅಂತರದಿಂದ ವೆಸ್ಟ್ ಇಂಡೀಸ್ ಜಯಗಳಿಸಿತ್ತು. 2 ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್, ಭಾರತದ ಬೌಲರ್ ಗಳ ಸಂಘಟಿತ ದಾಳಿಗೆ ತತ್ತರಿಸಿ 19.4 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 143 ರನ್ ಗಳಿಸಿತು. ಭಾರತದ ಪರವಾಗಿ ಅಮಿತ್ ಮಿಶ್ರಾ 3, ಮೊಹಮ್ಮದ್ ಶಮಿ, ಆರ್.ಅಶ್ವಿನ್, ಜಸ್ ಪ್ರೀತ್ ಬೂಮ್ರಾ ತಲಾ 2 ವಿಕೆಟ್ ಪಡೆದರು. 144 ರನ್ ಗೆಲುವಿನ ಗುರಿ ಬೆನ್ನತ್ತಿದ ಭಾರತ ವಿಕೆಟ್ ನಷ್ಟವಿಲ್ಲದೇ 2 ಓವರ್ ಗಳಲ್ಲಿ 15 ರನ್ ಗಳಿಸಿತ್ತು. ಆಗ ಮಳೆ ಸುರಿದ ಕಾರಣ ಆಟವನ್ನು ರದ್ದುಪಡಿಸಿದ್ದು, ವಿಂಡೀಸ್ ಸರಣಿಯನ್ನು ಜಯಿಸಿದ ನಗೆ ಬೀರಿತು.

► Follow us on –  Facebook / Twitter  / Google+

Facebook Comments

Sri Raghav

Admin