1.37ಕೋಟಿ ರೂ ಎಟಿಎಂ ಹಣದೊಂದಿಗೆ ಪರಾರಿಯಾಗಿದ್ದ ಡೊಮ್ನಿಕ್ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Domik-ATM

ಬೆಂಗಳೂರು, ನ.29– ವಿವಿಧ ಬ್ಯಾಂಕ್‍ಗಳಿಂದ ಹಣ ಸಂಗ್ರಹಿಸಿ ಎಟಿಎಂಗಳಿಗೆ ತುಂಬಲು ಹೋಗುವಾಗ ಕಳೆದ ಬುಧವಾರ(ನ.23) ಕೆ.ಜಿ.ರಸ್ತೆಯಿಂದ 1.37ಕೋಟಿ ರೂ.ಗಳೊಂದಿಗೆ ವ್ಯಾನ್‍ನೊಂದಿಗೆ ನಾಪತ್ತೆಯಾಗಿದ್ದ ಚಾಲಕ ಡೊಮಿನಿಕ್ ಕೊನೆಗೂ ಇಂದು ಮುಂಜಾನೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಭಾನುವಾರ ರಾತ್ರಿ ಈತನ ಪತ್ನಿ ಎಲ್ವಿನ್ ಮೇರಿ ಪೊಲೀಸರಿಗೆ ಶರಣಾಗಿದ್ದರು. ನಂತರ ಅವರ ಬಳಿ ಇದ್ದ 79 ಲಕ್ಷ ರೂ.ಗಳನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿದ ನಂತರ ಹಣ ದೋಚಿದ ಘಟನೆಯ ಒಂದೊಂದೇ ಮಾಹಿತಿಯನ್ನು ಆಕೆ ಬಾಯ್ಬಿಟ್ಟಿದ್ದಳು.
ಚನ್ನೈನಿಂದ ಬೆಂಗಳೂರಿಗೆ ಬಂದು ಪತ್ನಿ ಎಲ್ವಿನ್‍ಗೆ ಹಣ ಕೊಟ್ಟು ತಾಯಿ ಮನೆಗೆ ಹೋಗು ಎಂದು ಹೇಳಿ ಹಳೇ ಮದ್ರಾಸು ರಸ್ತೆಯ ಟಿನ್ ಪ್ಯಾಕ್ಟರ್ ಬಳಿ ನಾಪತ್ತೆಯಾಗಿದ್ದ ಆರೋಪಿ ಡೊಮಿನಿಕ್ ಇಂದು ಮುಂಜಾನೆ 3.30ರಲ್ಲಿ ಉಪ್ಪಾರ ಪೇಟೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ಬ್ಯಾಗ್ ಹಿಡಿದುಕೊಂಡು ಚನ್ನೈಗೆ ಪರಾರಿಯಾಗುವ ಯತ್ನದಲ್ಲಿದ್ದಾಗ ಮಫ್ತಿಯಲ್ಲಿದ್ದ ಪೊಲೀಸರು ಆತನನ್ನು ಐಟಿಐ ಟಿನ್ ಪ್ಯಾಕ್ಟರಿ ಬಳಿಯೇ ಸೆರೆ ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಕಳೆದ ಶನಿವಾರ ವಸಂತನಗರದ ಬಳಿ ಡೊಮಿನಿಕ್ ಬಿಟ್ಟು ಹೋಗಿದ್ದ ವಾಹನದಲ್ಲಿ 45 ಲಕ್ಷ ಸಿಕ್ಕಿತ್ತು. ನಂತರ ಆತನ ಪತ್ನಿ ಎಲ್ವಿನ್ ಬಳಿ 79 ಲಕ್ಷ ಸಿಕ್ಕಿದ್ದು, ಇನ್ನು 12 ಲಕ್ಷ ಎಲ್ಲಿ ಹೋಯ್ತು ಎಂಬುದು ಇನ್ನೂ ತಿಳಿದು ಬಂದಿಲ್ಲ. ಮೂಲಗಳ ಪ್ರಕಾರ ಆತ ಸಣ್ಣಪುಟ್ಟ ಸಾಲಗಳನ್ನು ತೀರಿಸಿ ಕೆಲವು ವಸ್ತುಗಳನ್ನು ಖರೀದಿಸಿದ್ದು, ಆತನ ಬಳಿ ಈಗ 6 ಲಕ್ಷ ಇತ್ತು, ಅದು ಎಲ್ಲಿಟ್ಟಿದ್ದಾನೆ ಎಂಬ ಬಗ್ಗೆ ಪೊಲೀಸರು ಬಾಯಿ ಬಿಡುಸುತ್ತಿದ್ದಾರೆ.

ಸ್ನೇಹಿತನ ಮನೆಗೆ ಬಂದಾಗ ಡೊಮಿನಿಕ್‍ನನ್ನು ನೋಡಿ ಆಶ್ರಯ ನೀಡಲು ನಿರಾಕರಿಸಿಲಾಗಿತ್ತು. ಆದರೂ ಅಂಗಲಾಚಿ ನಾಳೆ ಇಲ್ಲಿಂದ ಹೋಗುತ್ತೇನೆ ಎಂದು ಮನವೊಲಿಸಿದ್ದ. ಅದರಂತೆ ತಯಾರಿ ನಡೆಸಿಕೊಂಡು ಕಳೆದ ರಾತ್ರಿಯೇ ಯಾರಿಗೂ ತಿಳಿಯದಂತೆ ದೂರದ ಸ್ಥಳಕ್ಕೆ ತೆರಳಲು ಯೋಚಿಸಿದ್ದ ಎಂದು ತಿಳಿದು ಬಂದಿದೆ.  ಸ್ನೇಹಿತನೊಬ್ಬನಿಗೆ ದೂರವಾಣಿ ಕರೆ ಮಾಡಿ ತಾನು ಟಿನ್ ಪ್ಯಾಕ್ಟರಿ ಬಳಿ ಬರುತ್ತಿರುವುದಾಗಿ ಹೇಳಿ ಮುಂಜಾನೆ ಬಂದಾಗ ಈತ ಸಿಕ್ಕಿಬಿದ್ದಿದ್ದಾನೆ. ಪತ್ನಿ ಎಲ್ವಿನ್ ಬಂಧನದ ನಂತರ ಆತ ಬೆಂಗಳೂರಿಗೆ ಬಂದಿರುವುದನ್ನು ಖಾತ್ರಿ ಪಡಿಸಿಕೊಂಡ ಪೊಲೀಸರು ಈ ಪ್ರದೇಶದಲ್ಲೇ ತಲೆ ಮರೆಸಿಕೊಂಡಿರಬೇಕೆಂದು ನಿನ್ನೆಯಿಂದಲೇ ವ್ಯಾಪಕ ಕಾರ್ಯಾಚರಣೆ ನಡೆಸಿದ್ದರು. ಪೊಲೀಸರ ನಿರೀಕ್ಷೆಯಂತೆ ಡೊಮಿನಿಕ್ ಕೊನೆಗೂ ಸಿಕ್ಕಿ ಬಿದ್ದಿದ್ದಾನೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin