10 ಕಾಡಾನೆ ದಾಳಿ ಲಕ್ಷಾಂತರ ರೂ. ಬೆಳೆ ನಾಶ

ಈ ಸುದ್ದಿಯನ್ನು ಶೇರ್ ಮಾಡಿ

elephant
ಕೊಡಗು, ಆ.12- ಕಾಡಾನೆ ದಾಳಿ ಮಾಡಿದ ಪರಿಣಾಮ ವಿರಾಜಪೇಟೆ ತಾಲ್ಲೂಕು ಶ್ರೀಮಂಗಲದ ಮಂದಣ್ಣ, ಕುಶಾಲಪ್ಪ ಅವರುಗಳಿಗೆ ಸೇರಿದ ಲಕ್ಷಾಂತರ ರೂ.ನ ಕಾಫಿ, ಕರಿಮೆಣಸು ಸಂಪೂರ್ಣ ಹಾನಿಗೊಳಗಾಗಿದೆ.
ರೈತರ ತೋಟಕ್ಕೆ ನುಗ್ಗಿದ 10ಕ್ಕೂ ಹೆಚ್ಚು ಕಾಡಾನೆಗಳು ಕರಿಮೆಣಸು, ಕಾಫಿಯನ್ನು ಸಂಪೂರ್ಣವಾಗಿ ಹಾಳು ಮಾಡಿವೆ. ತಾಲ್ಲೂಕಿನಾದ್ಯಂತ ಮಿತಿಮೀರಿರುವ ಕಾಡಾನೆ ಹಾವಳಿಯಿಂದಾಗಿ ರೈತರು ಭಯಭೀತಿಗೊಂಡಿದ್ದಾರೆ.
ಈ ಬಗ್ಗೆ ಹತ್ತಾರು ಬಾರಿ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಅರಣ್ಯ ಇಲಾಖೆ ವಿರುದ್ಧ ರೈತರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin