10 ದಿನಗಳಲ್ಲಿ ಶೂಟಿಂಗ್ ಕಲಿತ ವಿದ್ಯಾ ಬಾಲನ್

ಈ ಸುದ್ದಿಯನ್ನು ಶೇರ್ ಮಾಡಿ

VIDYA-BALN
ಬಾಲಿವುಡ್ ಪ್ರತಿಭಾವಂತ ಅಭಿನೇತ್ರಿ ವಿದ್ಯಾ ಬಾಲನ್ ಸಹಜ ಅಭಿನಯಕ್ಕೆ ಹೆಸರಾದವಳು. ಪಾತ್ರದ ಮಹತ್ವವನ್ನು ಅರಿತು ಅದಕ್ಕೆ ಜೀವ ತುಂಬಿ ನಟಿಸುವ ಕಲೆ ಈಕೆಗೆ ಕರಗತ. ಬೇಗಂ ಜಾನ್ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಕ್ಕಾಗಿ ವಿದ್ಯಾ ಕುದುರೆ ಸವಾರಿ ಮತ್ತು ಬಂದೂಕು ಹಾರಿಸುವುದನ್ನು ಕಲಿತಿದ್ದಾಳೆ. ಬೇಗಂ ಜಾನ್ ಚಿತ್ರದಲ್ಲಿ ವೇಶ್ಯಾಗೃಹದ ಒಡತಿ ಪಾತ್ರದಲ್ಲಿ ನಟಿಸುತ್ತಾ ಸುದ್ದಿ ಮಾಡಿರುವ ವಿದ್ಯಾ ಈ ಸಿನಿಮಾದಲ್ಲಿ ವೈರಿಗಳ ವಿರುದ್ಧ ಹೋರಾಡಲು ಕುದುರೆ ಸವಾರಿ ಮತ್ತು ಗುಂಡು ಹಾರಿಸುವುದನ್ನು ಕಲಿಯಬೇಕಿತ್ತು.

ಇದಕ್ಕಾಗಿ ಜಾರ್ಖಂಡ್‍ನ ಸೆಟ್‍ನಲ್ಲಿ ವಿದ್ಯಾಳಿಗೆ ವಿಶೇಷ ತರಬೇತಿ ನೀಡಲಾಗಿದೆ. ಗನ್ ಲೋಡ್ ಮತ್ತು ಅನ್‍ಲೋಡ್ ಮಾಡುವ, ನಿಖರ ಗುರಿಯತ್ತ ಗುಂಡು ಹಾರಿಸುವುದರಲ್ಲಿ ಈಕೆ ಈಗ ಪಳಗಿದ್ದಾಳೆ. ಕೇವಲ 10 ದಿನಗಳಲ್ಲಿ ಶೂಟ್ ಮಾಡುವುದನ್ನು ಕರಗತ ಮಾಡಿಕೊಂಡಿದ್ದಾಳೆ. ಚಿತ್ರದ ಸಹಜತೆಗೆ ಒತ್ತು ನೀಡಲು ಭಾರೀ ತೂಕವುಳ್ಳ ಹಳೆ ಕಾಲದ ಬಂದೂಕವನ್ನು ಬಳಸಲಾಗಿದೆ. ಆದರೂ ಇದನ್ನು ಲೆಕ್ಕಿಸದೇ ವಿದ್ಯಾ ಶ್ರದ್ಧೆಯಿಂದ ಶೂಟೌಟ್ ಕಲಿತಿದ್ದಾಳೆ. ಸ್ವಾತಂತ್ರ್ಯ ನಂತರ ಭಾರತ-ಪಾಕಿಸ್ತಾನ ವಿಭಜನೆ ಬಳಿಕ ನಡೆದ ಸತ್ಯ ಘಟನೆಯೊಂದನ್ನು ಈ ಚಿತ್ರ ಆಧರಿಸಿದೆ. ರಾಜ್‍ಕಹಿನಿ ಎಂಬ ಬಂಗಾಳಿ ಚಿತ್ರದಲ್ಲಿ ರಿತುಪರ್ಣ ಸೇನ್‍ಗುಪ್ತಾ ಘರ್‍ವಾಲಿ ಪಾತ್ರ ಮಾಡಿದ್ದಳು. ಈಗ ಹಿಂದಿಯಲ್ಲಿ ನಿರ್ಮಾಣವಾಗುತ್ತಿರುವ ಬೇಗಂ ಜಾನ್ ಸಿನಿಮಾಗಾಗಿ ವಿದ್ಯಾ ಸಾಕಷ್ಟು ತಯಾರಿಯೊಂದಿಗೆ ಸಹಜ ಅಭಿನಯ ನೀಡುತ್ತಿದ್ದಾಳೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin