ಕೊರೋನಾ ಲಕ್ಷಣ ಇಲ್ಲದವರಿಗೆ 10 ದಿನ ಮಾತ್ರ ಚಿಕಿತ್ಸೆ : ಕೇಂದ್ರ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.12- ಕೊರೊನಾ ಸೋಂಕಿತರ ಡಿಸ್ಚಾರ್ಜ್ ಮತ್ತು ಹೋಂ ಐಸೊಲೇಷನ್‍ನಲ್ಲಿ ಭಾರೀ ಬದಲಾವಣೆಯಾಗಿದೆ. ಕೇಂದ್ರ ಸರ್ಕಾರದ ಮಾರ್ಗ ಸೂಚಿಯಂತೆ ಡಿಸ್ಚಾರ್ಜ್ ನೀತಿಯನ್ನು ಆರೋಗ್ಯ ಇಲಾಖೆ ಮಾರ್ಪಾಡು ಮಾಡಿ ಆದೇಶ ಹೊರಡಿಸಿದೆ.

ಎ ಸಿಂಪ್ಟಮ್ ಇರುವವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು 10 ದಿನಕ್ಕೆ ಡಿಸ್ಚಾರ್ಜ್ ಮಾಡಲು ತೀರ್ಮಾನಿಸಲಾಗಿದೆ. ಡಿಸ್ಚಾರ್ಜ್ ಸಂದರ್ಭದಲ್ಲಿ ಯಾವುದೇ ಕೋವಿಡ್ ಟೆಸ್ಟ್ ನಡೆಸುವುದಿಲ್ಲ.

ಡಿಸ್ಚಾರ್ಜ್ ಆದ ಬಳಿಕ 14 ದಿನಗಳ ಬದಲು ಏಳು ದಿನ ಹೋಂ ಕ್ವಾರಂಟೈನ್ ಮಾಡಲಾಗುವುದು. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರವೂ ಕೊರೊನಾ ಲಕ್ಷಣಗಳು ಕಂಡುಬಂದರೆ ಆಪ್ತಮಿತ್ರ ಹೆಲ್ಪ್‍ಲೈನ್‍ಗೆ ತಿಳಿಸಬೇಕು.

ಕಡಿಮೆ ಮತ್ತು ಸಾಧಾರಣ ರೋಗ ಲಕ್ಷಣ ಇರುವವರನ್ನು 10 ದಿನ ಆಸ್ಪತ್ರೆಗೆ ದಾಖಲು ಮಾಡಿಕೊಂಡು ಡಿಸ್ಚಾರ್ಜ್ ಮಾಡುವ ಮೂರು ದಿನ ಮೊದಲು ಕೊರೊನಾ ಪರೀಕ್ಷೆ ನಡೆಸಿ ಲಕ್ಷಣಗಳು ಕಂಡುಬರದಿದ್ದರೆ ಬಿಡುಗಡೆ ಮಾಡಲಾಗುವುದು.

10 ದಿನಗಳ ನಂತರವೂ ರೋಗ ಲಕ್ಷಣ ಮುಂದುವರಿದರೆ 17ನೆ ದಿನಕ್ಕೆ ಡಿಸ್ಚಾರ್ಜ್ ಮಾಡಲಾಗುವುದು. ಆ ಸಂದರ್ಭದಲ್ಲಿ ಕೊರೊನಾ ಪರೀಕ್ಷೆ ನಡೆಸುವುದಿಲ್ಲ. ಡಿಸ್ಚಾರ್ಜ್ ಆದ ಬಳಿಕ ಏಳು ದಿನ ಹೋಂ ಕ್ವಾರಂಟೈನ್‍ನಲ್ಲಿರಬೇಕು. 14 ದಿನ ಟೆಲಿ ಕಾನರೆನ್ಸ್ ಮಾಡಬೇಕು.

ಹೋಂ ಕ್ವಾರಂಟೈನ್ ಆಗುವವರು 10 ದಿನ ಮನೆಯಲ್ಲಿರಬೇಕು. ಮೂರು ದಿನಗಳೊಳಗೆ ಜ್ವರ ಬಾರದಂತಿರಬೇಕು. ಏಳು ದಿನದ ನಂತರ ಪಲ್ಸ್‍ರೇಟ್ ಚೆಕ್ ಮಾಡಿಕೊಳ್ಳುವುದು.

ಒಂದು ವೇಳೆ ಕೆಲಸಕ್ಕೆ ಹೋಗಲೇಬೇಕಾದರೆ ಕೊರೊನಾ ನೆಗೆಟಿವ್ ಸರ್ಟಿಫಿಕೆಟ್ ಪಡೆದುಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ.

Facebook Comments

Sri Raghav

Admin