ಉತ್ತರ ಪ್ರದೇಶದಲ್ಲಿ ಮುಂದುವರಿದ ಮಳೆ ಆರ್ಭಟ, ಮತ್ತೆ 12 ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Uttar-Pradesh--01

ಲಕ್ನೋ, ಸೆ.4-ಉತ್ರರ ಪ್ರದೇಶದಲ್ಲಿ ಮುಂದುವರಿದ ಭಾರೀ ಮಳೆ ಮತ್ತು ಪ್ರವಾಹದಿಂದ ಕಳೆದ 24 ಗಂಟೆಗಳಲ್ಲಿ ಮತ್ತೆ 12 ಮಂದಿ ಮೃತಪಟ್ಟಿದ್ದು, ಸತ್ತವರ ಸಂಖ್ಯೆ 40ಕ್ಕೇರಿದೆ. ಮಳೆ ಅವಾಂತರಕ್ಕೆ 14 ಜನರು ಗಾಯಗೊಂಡಿದ್ದಾರೆ.  ಗೊಂಡಾ, ಖುಷ್‍ನಗರ್, ಮಿರ್ಜಾಪುರ್, ಬರೈಚ್, ಸೀತಾಪುರ್, ಮೀರತ್, ಮತ್ತು ಇಥಾ ಜಿಲ್ಲೆಗಳಲ್ಲಿ ವರುಣಾಘಾತಕ್ಕೆ ಮತ್ತೆ 12 ಮಂದಿ ಬಲಿಯಾಗಿದ್ದಾರೆ ಎಂದು ರಕ್ಷಣಾ ಮತ್ತು ಪರಿಹಾರ ಆಯುಕ್ತ ಸಂಜಯ್ ಕುಮಾರ್ ತಿಳಿಸಿದ್ದಾರೆ. ಈ ದುರಂತದಲ್ಲಿ ಹಲವು ಮನೆಗಳು ಕುಸಿದಿದ್ದು, ಕೆಲವು ಜಾನುವಾರುಗಳೂ ಸಹ ಮೃತಪಟ್ಟಿವೆ.

ನಿನ್ನೆ ಜಾನ್ಸಿ, ಇಟವಾ, ಫಿರೋಜಾಬಾದ್, ರಾಯ್‍ಬರೇಲಿ, ಔರೈಯಾ, ಶಾಮ್ಲಿ, ಮಹರಾಜ್‍ಗಂಜ್ ಪ್ರದೇಶಗಳಲ್ಲಿ ಧಾರಾಕಾರ ಮಳೆ, ಗುಡುಗು ಸಿಡಲಿನ ಆರ್ಭಟ ಹಾಗೂ ಮನೆ ಕುಸಿತದಿಂದ 12 ಮಂದಿ ಮೃತಪಟ್ಟು, 15ಕ್ಕೂ ಹೆಚ್ಚು ಜನರು ತೀವ್ರ ಗಾಯಗೊಂಡಿದ್ದರು.

Facebook Comments

Sri Raghav

Admin