ಟ್ರ್ಯಾಕ್ಟರ್ ಉರುಳಿ 10 ಯಾತ್ರಿಗಳ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸಹರನ್‍ಪುರ್, ಆ.8- ಟ್ರ್ಯಾಕ್ಟರ್ ಟ್ರಾಲಿಯೊಂದು ಉರುಳಿ ಕನಿಷ್ಠ 10 ಯಾತ್ರಿಕರು ಮೃತರಾಗಿ, ಇತರೆ 30 ಮಂದಿ ಗಾಯಗೊಂಡಿರುವ ಘಟನೆ ನಿನ್ನೆ ಇಲ್ಲಿ ಸಂಭವಿಸಿದೆ. ಸಹರಸೌರ್‍ನ ಸಹಜ್ವಾ ಪ್ರದೇಶದಿಂದ ಸುಲ್ತಾನ್‍ಪುರ ಗ್ರಾಮಕ್ಕೆ ಮಹಿಳೆಯರು ಮತ್ತು ಮಕ್ಕಳು ಒಳಗೊಂಡಂತೆ 40ಯಾತ್ರಾರ್ಥಿಗಳನ್ನು ಟ್ರ್ಯಾಕ್ಟರ್ ಟ್ರಾಲಿ  ಕೊಂಡೊಯ್ಯುತ್ತಿದ್ದಾಗ ಈ ದುರಂತ ಸಂಭವಿಸಿತು.  ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಇವರು ತೆರಳುತ್ತಿದ್ದಾಗ ಟ್ರ್ಯಾಕ್ಟರ್ ಉರುಳಿಬಿತ್ತು. ಸ್ಥಳದಲ್ಲೇ 10 ಮಂದಿ ಅಸುನೀಗಿದರು. ಗಾಯಗೊಂಡ 30 ಜನರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.

10 Pilgrims Killed, 30 Injured as Tractor Overturns in UP

Facebook Comments

Sri Raghav

Admin