ಪ್ರಮಾಣ ವಚನ ಸ್ವೀಕರಿಸಿದ ಹೈಕೋರ್ಟ್‍ನ 10 ನೂತನ ನ್ಯಾಯಾಮೂರ್ತಿಗಳು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.25- ಕರ್ನಾಟಕ ಹೈಕೋರ್ಟ್‍ಗೆ ಹೊಸದಾಗಿ ನೇಮಕವಾದ 10 ಮಂದಿ ನ್ಯಾಯಮೂರ್ತಿಗಳಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣವಚನ ಬೋಧಿಸಿದರು.

ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ನ್ಯಾಯಮೂರ್ತಿಗಳಾದ ಮರಳೂರು ಇಂದ್ರಕುಮಾರ್ ಅರುಣ್, ಎಂಗಲಗುಪ್ಪೆ ಸೀತಾರಾಮಯ್ಯ ಇಂದ್ರೇಶ್ , ರವಿ ವೆಂಕಪ್ಪಹೊಸಮನಿ, ಸವಣೂರು ವಿಶ್ವಜಿತ್ ಶೆಟ್ಟಿ, ಶಿವಶಂಕರ್ ಅಮರನ್ನವರ್, ಮಕ್ಕೀಮನೆ ಗಣೇಶಯ್ಯ ಉಮಾ, ವೇಸವ್ಯಾಸಚಾರ್ ಶ್ರೀಶಾನಂದ, ಹಂಚಟೆ ಸಂಜೀವ್ ಕುಮಾರ್, ಪದ್ಮರಾಜï ನೇಮಚಂದ್ರ ದೆಸಾಯï ಮತ್ತು ಪಂಜಿಗಡ್ಡೆ ಕೃಷ್ಣ ಭಟ್ ಅವರುಗಳು ಪ್ರಮಾಣ ವಚನ ಸ್ವೀಕರಿಸಿದರು.

ಸಮಾರಂಭದಲ್ಲಿ ಹೈಕೋರ್ಟ್‍ನ ಮುಖ್ಯ ನ್ಯಾಯಾಧೀಶರಾದ ಸತೀಶ್ ಚಂದ್ರ ಶರ್ಮಾ, ಮುಖ್ಯಮಂತ್ರಿ ಬಸವರಾಜï ಬೊಮ್ಮಾಯಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಸರ್ಕಾರ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Facebook Comments