ಹಾಸನದಲ್ಲಿ 10 ಮಂದಿ ಶಿಕ್ಷಕರಿಗೆ ಕೊರೊನಾ..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಜ.6- ಜಿಲ್ಲಾಯಲ್ಲಿ 10 ಮಂದಿ ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಿರುವುದು ದೃಢಪಟ್ಟಿದೆ ಎಂದು ಡಿಡಿಪಿಐ ಪ್ರಕಾಶ್ ಮಾಹಿತಿ ನೀಡಿದ್ದಾರೆ. ಶಾಲೆ ಪ್ರಾರಂಭವಾದ ಬಳಿಕ 10 ಮಂದಿ ಶಿಕ್ಷಕರಲ್ಲಿ ಪಾಸಿಟಿವ್ ಬಂದಿದೆ. ಪ್ರಾಥಮಿಕ ಶಾಲೆಯ 7 ಮಂದಿ ಮತ್ತು ಪ್ರೌಢಶಾಲೆಯ 3 ಮಂದಿ ಶಿಕ್ಷಕರಿಗೆ ಕೋವಿಡ್ ದೃಢಪಟ್ಟಿದೆ ಎಂದಿದ್ದಾರೆ.

ಶಾಲೆ ಆರಂಭಕ್ಕೂ ಮುನ್ನ 3 ಮಂದಿ ಶಿಕ್ಷಕರಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. 3 ಮಂದಿ ಶಿಕ್ಷಕರು ಶಾಲೆಗೆ ಹಾಜರಾಗಿರಲಿಲ್ಲ. ಶಾಲೆ ಆರಂಭವಾದ ಬಳಿಕ ಎರಡು ದಿನಗಳಿಂದ 7 ಮಂದಿ ಶಿಕ್ಷಕರಿಗೆ ಕೊರೊನಾ ದೃಢವಾಗಿದೆ ಎಂದು ತಿಳಿಸಿದ್ದಾರೆ.  ಪಿಯುಸಿ ವಿಭಾಗದಲ್ಲಿ ಯಾವುದೇ ಕೋವಿಡ್ ಪ್ರಕರಣಗಳು ದಾಖಲಾಗಿಲ್ಲ ಎಂದು ಪ್ರಕಾಶ್ ಹೇಳಿದ್ದಾರೆ.

Facebook Comments