100 ದೇಶಗಳ ಸಹಸ್ರಾರು ಕಂಪ್ಯೂಟರ್‍ಗಳ ಮೇಲೆ ‘ರಾನ್‍ಸಮ್‍ವೇರ್’ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Ransomware-attack

ಲಂಡನ್/ಮ್ಯಾಡ್ರಿಡ್/ವಾಷಿಂಗ್ಟನ್, ಮೇ 13-ಯುರೋಪ್, ಲ್ಯಾಟಿನ್ ಅಮೆರಿಕ ಮತ್ತು ಏಷ್ಯಾ ಖಂಡಗಳಲ್ಲಿ ರಾನ್‍ಸಮ್‍ವೇರ್ ಎಂಬ ಹಣ ಸುಲಿಗೆ ಮಾಡುವ ಸಾಫ್ಟ್‍ವೇರ್ ಹಾವಳಿ ಆತಂಕಕಾರಿ ಮಟ್ಟದಲ್ಲಿ ವ್ಯಾಪಿಸಿದ್ದು, ಭಾರೀ ಮೊತ್ತದ ಹಣ ಹ್ಯಾಕರ್‍ಗಳ ಪಾಲಾಗುತ್ತಿವೆ. ಈ ಸೈಬರ್ ದಾಳಿಯಿಂದ ವಿಶ್ವ ಆತಂಕಗೊಂಡಿದೆ.   100ಕ್ಕೂ ಹೆಚ್ಚು ದೇಶಗಳಲ್ಲಿ 74,000ಕ್ಕೂ ಹೆಚ್ಚು ಸೈಬರ್ ದಾಳಿಗಳು ನಡೆದಿದ್ದು, 1,00,000ಕ್ಕೂ ಅಧಿಕ ಕಂಪ್ಯೂಟರ್‍ಗಳಲ್ಲಿ ವೈರಸ್ ಸೋಂಕುಗಳು ಪತ್ತೆಯಾಗಿವೆ. ಈ ದಾಳಿಗೆ ಒಳಗಾದ ದೇಶಗಳಲ್ಲಿ ರಷ್ಯಾ ಮತ್ತು ಉಕ್ರೇನ್ ಅಗ್ರಸ್ಥಾನದಲ್ಲಿವೆ. ಸ್ವೀಡನ್, ಬ್ರಿಟನ್, ಫ್ರಾನ್ಸ್, ಭಾರತ, ತೈವಾನ್ ಮೊದಲಾದ ದೇಶಗಳೂ ಸೈಬರ್ ಆಕ್ರಮಣಕ್ಕೆ ಒಳಗಾಗಿವೆ.ಹ್ಯಾಕರ್‍ಗಳ ಈ ಹೊಸ ವಿಧಾನವನ್ನು ಅಂತಾರಾಷ್ಟ್ರೀಯ ಅಥವಾ ಜಾಗತಿಕ ಸೈಬರ್ ಆಕ್ರಮಣ ಎಂದೇ ಪರಿಗಣಿಸಲಾಗಿದೆ. ಹಲವಾರು ದೇಶಗಳ ಕಂಪ್ಯೂಟರ್‍ಗಳ ಮೇಲೆ ದಾಳಿ ನಡೆಸುತ್ತಿರುವ ಈ ಸಾಫ್ಟ್‍ವೇರ್‍ಗಳು (ಬಗ್‍ಗಳು) ಗೂಢಲಿಪೀಕರಣ ದತ್ತಾಂಶ (ಎನ್‍ಕ್ರಿಪ್ಟಿಂಗ್ ಡೇಟಾ) ಮೂಲಕ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸುತ್ತವೆ. ನಂತರ ಸುಲಿಗೆ ಹಣ ಪಾವತಿಯಾಗುವ ತನಕ ಯಂತ್ರೋಪಕರಣಗಳು ನಿಷ್ಪ್ರಯೋಜಕವಾಗುವಂತೆ ಮಾಡುತ್ತವೆ.

ಅಮೆರಿಕ ಭದ್ರತಾ ಸಂಸ್ಥೆಯಿಂದ (ಎನ್‍ಎಸ್‍ಎ) ಕಳವು ಮಾಡಲಾದ ಸೈಬರ್ ಅಸ್ತ್ರಗಳ (ಬಗ್) ಸಹಾಯದಿಂದ ಈ ಕೃತ್ಯಗಳನ್ನು ಹ್ಯಾಕರ್‍ಗಳು ಅವ್ಯಾಹತವಾಗಿ ಮುಂದುವರಿದಿದೆ.   ಈ ಮಾಲ್‍ವೇರ್ (ಸಾಫ್ಟ್‍ವೇರ್ ವ್ಯವಸ್ಥೆಯನ್ನು ಹಾಳುಗೆಡುಹುವ ವೈರಸ್) ಬಲೆಗೆ ಅಮೆರಿಕದ ಪ್ರತಿಷ್ಠಿತ ಫಡೆಎಕ್ಸ್ (ಫೆಡರಲ್ ಎಕ್ಸ್‍ಪ್ರೆಸ್ ಕೊರಿಯರ್ ಸಂಸ್ಥೆ) ಸೇರಿದಂತೆ ಅನೇಕ ಖ್ಯಾತ ಆಸ್ಪತ್ರೆಗಳು ಸಿಕ್ಕಿ ಬಿದ್ದು ಹಣ ಕಳೆದುಕೊಂಡಿವೆ. ವಿವಿಧ ದೇಶಗಳ ಅನೇಕ ಸಂಸ್ಥೆಗಳಿಗೂ ಈ ಸೈಬರ್ ಆಟ್ಯಾಕ್ ಅನುಭವವಾಗಿದೆ.

ರಾನ್‍ಸಮ್‍ವೇರ್ ಪಿಡುಗು ಅನೇಕ ರಾಷ್ಟ್ರಗಳ ಮೇಲೆ ಪರಿಣಾಮ ಬೀರಿದೆ. ಚಾಲಾಕಿ ಹ್ಯಾಕರ್‍ಗಳು ದೊಡ್ಡ ದೊಡ್ಡ ಸಂಸ್ಥೆಗಳ ಕಂಪ್ಯೂಟರ್‍ಗಳನ್ನು ಗುರಿಯಾಗಿಟ್ಟುಕೊಂಡು ಫೈಲ್‍ಗಳನ್ನು ಹರಿಯಬಿಡುತ್ತಾರೆ. ಇದರಲ್ಲಿರುವ ವೈರಸ್‍ಗಳು ಅವುಗಳ ಎನ್‍ಕ್ರಿಪ್ಟ್ ಡೆಟಾವನ್ನು ಸ್ವಯಂಚಾಲಿತವಾಗಿ ಹ್ಯಾಕರ್‍ಗಳಿಗೆ ತಿಳಿಸುತ್ತವೆ ಹಾಗೂ ಕಂಪ್ಯೂಟರ್‍ಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಸುಲಿಗೆ ಹಣ ವಸೂಲಿಯಾದ ನಂತರ ಹ್ಯಾಕರ್‍ಗಳು ವೈರಸ್ ತೆಗೆಯುತ್ತಾರೆ. ಅಲ್ಲಿಯ ತನಕ ಕಂಪ್ಯೂಟರ್‍ಗಳು ಸಂಪೂರ್ಣ ನಿಷ್ಕ್ರಿಯವಾಗುತ್ತವೆ.

ಸ್ಥಗಿತಗೊಂಡ ಕಂಪ್ಯೂಟರ್ ಕಾರ್ಯನಿರ್ವಹಣೆ ಸರಿಯಾಗಲು (ಎನ್‍ಕ್ಟ್ರಿಪ್ಸ್‍ನಿಂದ ಡಿಕ್ರಿಪ್ಟ್ ಮಾಡಲು) ಈ ಸಾಫ್ಟ್‍ವೇರ್ 300 ರಿಂದ 600 ಡಾಲರ್‍ಗಳ (ಸುಮಾರು 20,000 ರೂ.ಗಳಿಂದ 40,000 ರೂ.ಗಳು) ಹಣಕ್ಕಾಗಿ ಬೇಡಿಕೆ ಇಡುತ್ತವೆ. ಈ ಹಣವನ್ನು ಪಾವತಿಸದ ಹೊರತು ಯಂತ್ರಗಳು ಚಾಲನೆಯಾಗುವುದಿಲ್ಲ. .  ಇಂಗ್ಲೆಂಡ್‍ನ ಅನೇಕ ಅಸ್ಪತ್ರೆಗಳಲ್ಲೂ ರಾನ್‍ಸಮ್‍ವೇರ್ ವೈರಸ್ ದಾಳಿ ಮಾಡಿವೆ. ಕಂಪ್ಯೂಟರ್‍ಗಳು ಈ ಹಾವಳಿಗೆ ಒಳಗಾಗಿರುವುದರಿಂದ ಅನೇಕ ಆಸ್ಪತ್ರೆಗಳು ರೋಗಿಗಳನ್ನು ವಾಪಸ್ ಕಳುಹಿಸಿವೆ.   ವಿಶ್ವಾದ್ಯಂತ ಆತಂಕಕ್ಕೆ ಕಾರಣವಾಗಿರುವ ಈ ಹ್ಯಾಕಿಂಗ್ ರಾನ್‍ಸಮ್‍ವೇರ್‍ಗೆ ಕೊಕ್ಕೆ ಹಾಕಲು ಸಾಫ್ಟ್‍ವೇರ್ ದಿಗ್ಗಜ ಸಂಸ್ಥೆಗಳು ತಲೆ ಕೆಡಿಸಿಕೊಂಡಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin