ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 100 ಐಸಿಯು ಬೆಡ್ ವ್ಯವಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ 100 ಐಸಿಯು ಹಾಸಿಗೆಗಳಿಗೆ ವ್ಯವಸ್ಥೆ ಮಾಡಲಾಗುವುದು ಎಂದು ನಗರದ ಕೋವಿಡ್ ಕೇರ್ ಸೆಂಟರ್ ಉಸ್ತುವಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ಮಂಗಳವಾರ ಕೆಸಿ ಜನರಲ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಈ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ 4 ಹಾಸಿಗೆಗಳಿದ್ದು ಕೂಡಲೇ ಅವುಗಳ ಸಂಖ್ಯೆಯನ್ನು 100ಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಿದರು.

ಆಸ್ಪತ್ರೆಯ ಒಳಗೆ 50 ಹಾಸಿಗೆಗಳು ಹಾಗೂ ಆಸ್ಪತ್ರೆಯ ಹೊರಗೆ 50 ಮಾಡ್ಯೂಲರ್ ಐಸಿಯುಗಳನ್ನು ಸ್ಥಾಪಿಸಲಾಗುವುದು ಎಂದ ಅವರು, ಮಾಡ್ಯೂಲರ್ ಐಸಿಯುಗಳು ಒಂದು ರೀತಿಯಲ್ಲಿ ಮೊಬೈಲ್ ಐಸಿಯುಗಳಂತೆ ಇರುತ್ತವೆ.

ಸರಕು ಸಾಗಾಣಿಕೆಗೆ ಬಳಸಲಾಗುವ ಕಂಟೈನರುಗಳಲ್ಲಿ ಇವುಗಳನ್ನು ಸುಧಾರಿತ ತಂತ್ರಜ್ಞಾನ ಬಳಸಿ ಸಿದ್ಧಪಡಿಸಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು.

# ಸಿಬ್ಬಂದಿ ವ್ಯವಸ್ಥೆ:
ಕೆಸಿ ಜನರಲ್ ಆಸ್ಪತ್ರೆಯಲ್ಲಿ ವೈದ್ಯರು, ನರ್ಸುಗಳು ಸೇರಿ ಅರೆ ವೈದ್ಯಕೀಯ ಸಿಬ್ಬಂದಿಯ ಸಾಕಷ್ಟು ಕೊರತೆ ಇದೆ. ಆಂಬುಲೆನ್ಸ್’ಗಳ ಜತೆಗೆ ಅವುಗಳ ಚಾಲಕರ ಕೊರತೆಯೂ ಇದೆ ಎಂದು ವೈದ್ಯರು ಡಿಸಿಎಂ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಕೊರತೆಯನ್ನು ತಕ್ಷಣವೇ ನಿವಾರಿಸಲಾಗುವುದು. ಜತೆಗೆ, ಕೊರತೆ ಇರುವ ವೈದ್ಯಕೀಯ ಸಲಕರಣೆಗಳನ್ನೂ ಕೂಡಲೇ ಆಸ್ಪತ್ರೆಗೆ ಸರಬರಾಜು ಮಾಡಲಾಗುವುದು ಎಂದು ಹೇಳಿದರು.

ಆಂಟಿಜನ್ ಕಿಟ್ಟುಗಳು ತೀವ್ರ ಕೊರತೆ ಇದ್ದು ಅವುಗಳನ್ನು ತಕ್ಷಣ ಪೂರೈಸಬೇಕು ಎಂದು ವೈದ್ಯರು ಮಾಡಿದ ಮನವಿಗೂ ಸ್ಪಂದಿಸಿದ ಡಿಸಿಎಂ, ನಿಮಗೆ ಎಷ್ಟು ಲಕ್ಷ ಕಿಟ್ಟುಗಳು ಬೇಕಾದರೂ ಪೂರೈಕೆ ಮಾಡುತ್ತೇವೆ.ಆ ಬಗ್ಗೆ ಚಿಂತೆ ಬಿಡಿ. ರೋಗಿಗಳ ಕಡೆ ಹೆಚ್ಚು ಗಮನ ಕೊಡಿ. ಕೋವಿಡ್ ರಹಿತ ರೋಗಿಗಳಿಗೂ ಆದ್ಯತೆಯ ಮೇರೆಗೆ ಚಿಕಿತ್ಸೆ ನೀಡಿ ಎಂದು ಸೂಚಿಸಿದರು.

Facebook Comments

Sri Raghav

Admin