ನಟಿ ರಮ್ಯಾಕೃಷ್ಣ ಕಾರಿನಲ್ಲಿ 100ಕ್ಕೂ ಹೆಚ್ಚು ಮದ್ಯದ ಬಾಟಲಿಗಳು ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಜೂ. 14- ಬಹುಭಾಷಾ ನಟಿ ರಮ್ಯಾಕೃಷ್ಣರ ಕಾರಿನ ಚಾಲಕನನ್ನು ಮುತ್ತುಕಾಡು ಚೆಕ್‍ ಪೋಸ್ಟ್ ಬಳಿ ಪೊಲೀಸರು ಬಂಸಿದ್ದಾರೆ. ಬಂಧನ ವೇಳೆ ಕಾರಿನಲ್ಲಿ 96 ಬಿಯರ್ ಹಾಗೂ 8 ಲಿಕ್ಕರ್ ಬಾಟಲಿಗಳು ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಲಾಕ್ ಡೌನ್ ಸಡಿಲಿಕೆಯಾಗಿದ್ದರಿಂದ ಚೆನ್ನೈಗೆ ಹೋಗಿ ಲಿಕ್ಕರ್ ಕೊಳ್ಳುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಚೆಕ್ ಪೋಸ್ಟ್ ತಪಾಸಣೆ ಹೆಚ್ಚಿಸಲಾಗಿದ್ದು ಮಹಾಬಲಿಪುರಂನಿಂದ ತವರಿಗೆ ತೆರಳುತ್ತಿದ್ದ ರಮ್ಯಾಕೃಷ್ಣರ ಇನ್ನೋವಾ ಕಾರನ್ನು ಮುತ್ತುಕಾಡು ಚೆಕ್‍ ಪೋಸ್ಟ್ ನಲ್ಲಿ ಪೊಲೀಸರು ತಡೆದು ಪರಿಶೀಲಿಸಿದಾಗ 96 ಬಿಯರ್ ಬಾಟಲ್ ಹಾಗೂ 8 ಲಿಕ್ಕರ್ ಬಾಟಲಿಗಳನ್ನು ವಶಪಡಿಸಿಕೊಂಡು ಕಾರಿನ ಚಾಲಕ ಸೆಲ್ವಕುಮಾರ್‍ನನ್ನು ಕಾನತ್ತೂರು ಪೊಲೀಸರು ಬಂಸಿದ್ದಾರೆ.

ಈ ವೇಳೆ ಕಾರಿನಲ್ಲಿ ರಮ್ಯಾಕೃಷ್ಣ ಹಾಗೂ ಅವರ ತಂಗಿ ವಿನಯಕೃಷ್ಣರವರು ಇದ್ದರೆಂದು ಹೇಳಲಾಗುತ್ತಿದೆ, ಚಾಲಕ ಸೆಲ್ವಕುಮಾರ್‍ನನ್ನು ರಮ್ಯಾಕೃಷ್ಣರೇ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Facebook Comments

Sri Raghav

Admin