ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ನಿರ್ಮಾಪರ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.21-ರಾಜ್ಯದ ಚಿತ್ರ ಮಂದಿರಗಳಲ್ಲಿ ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ನೀಡುವಂತೆ ನಿರ್ಮಾಪಕರು ಆರೋಗ್ಯ ಸಚಿವ ಕೆ.ಸುಧಾಕರ್ ಅವರಲ್ಲಿ ಇಂದು ಮನವಿ ಮಾಡಿದರು.ವಿಧಾನಸೌಧದ ಸಚಿವರನ್ನು ನಿರ್ಮಾಪಕರಾದ ಜಯಣ್ಣ, ಸೂರಪ್ಪ ಬಾಬು, ಕೆ.ಪಿ ಶ್ರೀಕಾಂತ್ ಭೇಟಿ ಮನವಿ ಸಲ್ಲಿಸಿದರು.

ಪೂರ್ಣ ಪ್ರಮಾಣದಲ್ಲಿ ಸೀಟು ಭರ್ತಿಗೆ ಅವಕಾಶ ನೀಡುವಂತೆ ಮನವಿ ಮಾಡಿರುವ ನಿರ್ಮಾಪಕರುನಿರ್ಮಾಪಕರಿಗೆ ತುಂಬಾ ಸಮಸ್ಯೆಗಳಾಗುತ್ತಿವೆ. ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ದೊಡ್ಡ ನಟರ ಸಿನಿಮಾಗಳು ಪ್ರದರ್ಶನಕ್ಕೆ ಸಿದ್ಧವಾಗಿವೆ. ಆದರೆ, ಶೇ.50ರಷ್ಟು ಮಾತ್ರ ಸೀಟು ಭರ್ತಿಗೆ ಅವಕಾಶ ನೀಡಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಾ.ಕೆ. ಸುಧಾಕರ್, ಸಿನಿಮಾ ಮಂದಿರಗಳು ಸದ್ಯಕ್ಕೆ ಶೇ ಐವತ್ತರಷ್ಟು ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ.ಈಗ ನಿರ್ಮಾಪಕರು ಭೇಟಿ ಮಾಡಿ ಶೇ. ನೂರರಷ್ಟು ಸೀಟು ಭರ್ತಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

ಸಿನಿಮಾ ರಂಗಕ್ಕೆ ಸೇರಿದವರು ಸಾಕಷ್ಟು ನಷ್ಟ ಅನುಭವಿಸುತ್ತಿರುವುದರ ಬಗ್ಗೆ ಅರಿವಿದೆ. ಈಗಾಗಲೇ ತಾಂತ್ರಿಕ ಪರಿಣಿತರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೇವೆ. ಇನ್ನೊಂದು ಎರಡು ಮೂರು ದಿನಗಳಲ್ಲಿ ತಾಂತ್ರಿಕ ತಜ್ಞರ ಜೊತೆ ಮಾತನಾಡುತ್ತೇವೆ. ಸಿನಿಮಾ ಮಂದಿರ ಗಳಿಗೆ ಶೇ ನೂರರಷ್ಟು ಅವಕಾಶ ಸಿಗಬಹುದು ಎಂಬ ಆಶಾಭಾವನೆ ಇದೆ. ಎಲ್ಲದಕ್ಕೂ ತಜ್ಞರ ಸಲಹೆಯೇ ಅಂತಿಮ ಎಂದರು.

ಚಲನ ಚಿತ್ರ ಮಂದಿರಕ್ಕೆ ಹೇಗೆ ಅನುಮತಿ ನೀಡಬೇಕು. ಸಿನಿಮ ಸಿಬ್ಬಂದಿಗಳಿಗೆ ಬಹಳಷ್ಟು ನಷ್ಟವಾಗಿದೆ. ಆ ನಿಟ್ಟಿನಲ್ಲಿ ಸರ್ಕಾರ ಯಾವ ರೀತಿ ಸಹಕಾರ ನೀಡಬೇಕು. ಸಹಕಾರದ ಜೊತೆ ಮುನ್ನೆಚ್ಚರಿಕೆ ಅಗತ್ಯ. ಸೋಂಕು ಮತ್ತೆ ಹೆಚ್ಚಳವಾಗದಂತೆ ಕ್ರಮ ವಹಿಸಬೇಕು. ಮುಖ್ಯಮಂತ್ರಿ ನಾನು ಹಾಗೂ ಎಲ್ಲರೂ ಚರ್ಚೆ ಮಾಡಿ ಮುಂದಿನ ನಿರ್ಧಾರ ಮಾಡುತ್ತೇವೆ.

ಈಗ ನಮಗೆ 600-800 ಕೋವಿಡ್ ಕೇಸ್ ಬರ್ತಿದೆ. ಶೇ.1 ಕ್ಕಿಂತ ಕಡಿಮೆ ಕೇಸ್ ಇದೆ. ಎಲ್ಲಾ ಜಿಲ್ಲೆಗಳಲ್ಲಿ ಸೋಂಕು ಕಡಿಮೆಯಾದರೆ ಎಲ್ಲಾ ಸಡಿಲ ಮಾಡೋದಾಗಿ ಹೇಳಿದ್ದೇವೆ. ಚಲನಚಿತ್ರ ಉದ್ಯಮ ಬಹಳ ನಷ್ಟವಾಗಿದೆ. ಸರ್ಕಾರ ಅವರ ಜೊತೆ ನಿಲ್ಲಬೇಕಿದೆ. ಪಾಸಿಟಿವ್ ಆಗಿ ವಿಚಾರ ಮಾಡಿದ್ದೇವೆ. ಪೂರಕ ವಾತಾವರಣ ನಿರ್ಮಾಣ ಮಾಡಬೇಕು. ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ನಿರ್ಮಾಪಕ ಸೂರಪ್ಪ ಬಾಬು ಮಾತನಾಡಿ,ಆರೋಗ್ಯ ಸಚಿವರಲ್ಲಿ ಮನವಿ ಮಾಡಿದ್ದೇವೆ. ಮೂರು ದಿನಗಳಲ್ಲಿ ಬಿಬಿಎಂಪಿ ಅಧಿಕಾರಿಗಳು, ತಾಂತ್ರಿಕ ಸಲಹಾ ಸಮಿತಿ ಜೊತೆ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ.
ಸಭೆ ನಂತರ ಗುಡ್ ನ್ಯೂಸ್ ಕೊಡ್ತೀವಿ ಅಂದಿದಾರೆ.
ನಾವೂ ಕೂಡಾ ಒಳ್ಳೆಯ ಸುದ್ದಿಯ ನಿರೀಕ್ಷೆ ಯಲ್ಲಿ ಇದ್ದೇವೆ ಎಂದು ಹೇಳಿದರು.

ಹತ್ತು ದಿನದ ಹಿಂದೆ ಮುಖ್ಯಮಂತ್ರಿ ಭೇಟಿಯಾಗಿದ್ದೆವು. ಪೂರಕ ವಾತಾವರಣ ಇರುವುದರಿಂದ ಮಾಡಿಕೊಡೋಣ ಅಂತ ಚರ್ಚೆ ಮಾಡಿದ್ದೇವೆ. ಹತ್ತು ದಿನದಿಂದ ಟೆಕ್ನಿಕಲ್ ಟೀಮ್, ಬಿಬಿಎಂಪಿ ಹಾಗೂ ತಜ್ಞರ ಜೊತೆ ಕೂತು ಮಾತನಾಡಿದ್ದಾರೆ. ಸಿನಿ ರಸಿಕರಿಗೆ ಒಳ್ಳೆಯದು ಮಾಡಿಕೊಡಲಿದ್ದಾರೆ. ಶೀಘ್ರವೇ ನಮಗೆ ಅನುಕೂಲ ಮಾಡಿಕೊಡಲಿದ್ದಾರೆ. ಈ ತಿಂಗಳಾಂತ್ಯದಲ್ಲಿ ನಮಗೆ ಅನುಕೂಲ ಮಾಡಿಕೊಡಲಿದ್ದಾರೆ ಅಂದು ಕೊಂಡಿದ್ದೇವೆ ಎಂದರು.

ನಮ್ಮ ಕಷ್ಟ ಅರಿತು ಸಮಸ್ಯೆ ಬಗೆಹರಿಸಲಿದ್ದಾರೆ. 90ರಷ್ಟು ಕೆಲಸ ಆಗಿದೆ, ಇನ್ನು 10ರಷ್ಟು ಮಾತ್ರ ಕೆಲಸ ಬಾಕಿ ಇದೆ. ನಮಗೆಲ್ಲರಿಗೂ ಅನುಕೂಲ ಮಾಡಿಕೊಡಲಿದ್ದಾರೆ. ನಿಮ್ಮಷ್ಟೇ ಕುತೂಹಲ ನಮಗೂ ಇದೆ.

Facebook Comments

Sri Raghav

Admin