ಮುಂದಿನ ವಾರ ಅಮೆರಿಕದಿಂದ ಭಾರತಕ್ಕೆ ಬರಲಿವೆ 100 ವೆಂಟಿಲೇಟರ್

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಜೂ.3- ಡೆಡ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ನೆರವು ನೀಡುವ ನಿಟ್ಟಿನಲ್ಲಿ ಅಮೆರಿಕ ಕೊಡುಗೆ ಯಾಗಿ ನೀಡಿರುವ ಮೊದಲ ತಂಡದ 100 ವೆಂಟಿಲೇಟರ್‍ಗಳು (ಪ್ರಾಣವಾಯು ಸಾಧನ) ಮುಂದಿನ ವಾರ ಭಾರತ ತಲುಪಲಿವೆ.

ಹಡಗಿನ ಮೂಲಕ 100 ವೆಂಟಿಲೇಟರ್‍ಗಳ ಮೊದಲ ತಂಡ ಮುಂದಿನ ವಾರ ಭಾರತ ತಲುಪಲಿದೆ ಎಂದು ವಾಷಿಂಗ್ಟನ್‍ನಲ್ಲಿರುವ ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತಭವನದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ ಅವರ ನಡುವೆ ನಡೆದ ದೂರವಾಣಿ ಮಾತುಕತೆ ವೇಳೆ ಈ ವಿಷಯ ತಿಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ತಿಂಗಳಾಂತ್ಯದಲ್ಲಿ ಎರಡನೆ ತಂಡದ ವೆಂಟಿಲೇಟರ್‍ಗಳನ್ನು ಭಾರತಕ್ಕೆ ರವಾನಿಸಲಾಗು ವುದು ಎಂದು ಹೇಳಿದ್ದಾರೆ.

ಟ್ರಂಪ್-ಮೋದಿ ನಡುವೆ ನಡೆದ ದೂರವಾಣಿ ಸಂಭಾಷಣೆ ವೇಳೆ ಜಿ-7 ಶೃಂಗಸಭೆಗೆ ಭಾರತವನ್ನು ಪ್ರತಿನಿಧಿಸಲು ಪ್ರಧಾನಿಯನ್ನು ಅಮೆರಿಕ ಅಧ್ಯಕ್ಷರು ಆಹ್ವಾನಿಸಿ ದ್ದರು.

ಅಲ್ಲದೆ, ಅಮೆರಿಕದಲ್ಲಿ ಭುಗಿಲೆದ್ದ ಜನಾಂ ಗೀಯ ಘರ್ಷಣೆ ಇಂಡೋ-ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮತ್ತು ಪ್ರಾದೇಶಿಕ ಭದ್ರತೆ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ.

Facebook Comments