1000 ಮುಖಬೆಲೆ ಹೊಸ ನೋಟುಗಳು ಮತ್ತೆ ಚಲಾವಣೆಗೆ ಬರುವುದಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

1000-Notes--01

ನವದೆಹಲಿ, ಫೆ.22-ಒಂದು ಸಾವಿರ ರೂಪಾಯಿಗಳ ನೋಟುಗಳನ್ನು ಪರಿಚಯಿಸುವ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಸ್ಪಷ್ಟಪಡಿಸುವ ಮೂಲಕ 1,000 ರೂ.ಗಳ ಹೊಸ ಕರೆನ್ಸಿ ಚಲಾವಣೆಗೆ ಬರುತ್ತದೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.   1,000 ರೂ.ಗಳ ನೋಟುಗಳ ಬದಲು ಕಡಿಮೆ ಮುಖಬೆಲೆಯ ಕರೆನ್ಸಿಗಳ ಉತ್ಪಾದನೆ ಹೆಚ್ಚಳಕ್ಕೆ ಗಮನ ನೀಡುವುದಾಗಿ ಅವರು ತಿಳಿಸಿದ್ದಾರೆ.   ದೇಶದ ಎಟಿಎಂಗಳಲ್ಲಿ ನಗದು ಕೊರತೆ ಇದೆ ಎಂಬ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಅಭಾವ ನಿವಾರಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜನರು ತಮಗೆ ಅಗತ್ಯವಾದ ಹಣಕ್ಕಿಂತ ಹೆಚ್ಚಿನ ಮೊತ್ತವನ್ನು ವಿತ್‍ಡ್ರಾ ಮಾಡಬಾರದು ಎಂದು ಅವರು ಟ್ವೀಟರ್‍ನಲ್ಲಿ ಮನವಿ ಮಾಡಿದ್ದಾರೆ.
1,000 ರೂ.ಗಳ ನೋಟುಗಳನ್ನು ಪರಿಚಯಿಸುವ ಉದ್ದೇಶ ಇಲ್ಲ. ಬದಲಿಗೆ 500 ರೂ.ಗಳು ಮತ್ತು ಅದಕ್ಕಿಂತ ಕಡಿಮೆ ಮುಖಬೆಲೆಯ ಕರೆನ್ಸಿಗಳ ಉತ್ಪಾದನೆ ಮತ್ತು ಪೂರೈಕೆಗೆ ಆದ್ಯತೆ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹೊಸ ಸಾವಿರ ರೂ. ನೋಟುಗಳು ಚಲಾವಣೆಗೆ ಬರಲಿವೆ ಎಂಬುದು ಗಾಳಿ ಸುದ್ದಿಯಾಗಿದೆ ಎಂದಿದ್ದಾರೆ.  ಹಣಕಾಸು ಸಚಿವ ಅರುಣ್ ಜೇಟ್ಲಿ ಕಳೆದ ವಾರ ಹೇಳಿಕೆ ನೀಡಿ ದೇಶದಲ್ಲಿ ನೋಟುಗಳ ಕೊರತೆ ಇಲ್ಲ. ಬಹುತೇಕ ಬ್ಯಾಂಕ್‍ಗಳು ಮತ್ತು ಎಟಿಎಂಗಳಲ್ಲಿ ಹಣ ಲಭ್ಯತೆ ಸಹಜ ಸ್ಥಿತಿಗೆ ಬರುತ್ತಿದೆ. ಇನ್ನು ಕೆಲವು ವಾರಗಳಲ್ಲಿ ಪರಿಸ್ಥಿತಿ ಸಂಪೂರ್ಣ ಸುಧಾರಣೆಯಾಗಲಿದೆ ಎಂದು ತಿಳಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin