1,000 ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಮುಂದಾದ ರಾಜ್ಯ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Electricity-01

ಬೆಂಗಳೂರು, ಸೆ.20-ರಾಜ್ಯದಲ್ಲಿ ಕೆಲವು ಪ್ರದೇಶಗಳಲ್ಲಿ ನಿರೀಕ್ಷಿತ ಮಳೆಯಾಗದಿರುವ ಕಾರಣ ಸರ್ಕಾರ 1,000 ಮೆಗಾವ್ಯಾಟ್ ವಿದ್ಯುತ್ ಖರೀದಿಸಲು ಮುಂದಾಗಿದೆ. ರಾಜ್ಯಕ್ಕೆ ನಿಗದಿಯಾಗಿರುವ ವಿದ್ಯುತ್ ಪೂರೈಕೆಯಲ್ಲಿ ಕಡಿತವಾಗಿರುವ ಕಾರಣ ವಿದ್ಯುತ್ ಖರೀದಿ ನಡೆಸಲಾಗುತ್ತಿದೆ. ಇದಕ್ಕಾಗಿ ಟೆಂಡರ್ ಕೂಡ ಮುಗಿದಿದ್ದು, ಒಟ್ಟು ನಾಲ್ಕು ಕಂಪನಿಗಳು ವಿದ್ಯುತ್ ಪೂರೈಕೆ ಮಾಡಲಿವೆ. ಪ್ರತಿ ಯೂನಿಟ್ ವಿದ್ಯುತ್‍ಗೆ 4.08 ರೂ.ನಂತೆ ಖರೀದಿ ಮಾಡಲಾಗುತ್ತದೆ.

ಕರ್ನಾಟಕದಲ್ಲಿ ಒಟ್ಟಾರೆ 3,300 ಮೆಗಾ ವ್ಯಾಟ್ ವಿದ್ಯುತ್ ಕೊರತೆ ಇದೆ. ಮಳೆ ಕೊರತೆಯಿಂದಾಗಿ ಜಲ ವಿದ್ಯುತ್ ಪೂರೈಕೆಯಲ್ಲಿ 520 ಮೆಗಾ ವ್ಯಾಟ್, ಬಳ್ಳಾರಿ ಪವರ್ ಪ್ಲಾಂಟ್‍ನಿಂದ 700 ಮೆಗಾ ವ್ಯಾಟ್, ಯೆರಮುರಸ್ ವಿದ್ಯುತ್ ಉತ್ಪಾದನಾ ಕೇಂದ್ರದಿಂದ 1,600 ಮೆಗಾ ವ್ಯಾಟ್ ವಿದ್ಯುತ್ ಕಡಿಮೆ ಸರಬರಾಜಾಗುತ್ತಿದೆ. ಜತೆಗೆ ಕೂಡಕುಲಂ ಅಣು ಸ್ಥಾವರದಲ್ಲಿ ನಿರ್ವಹಣೆ ನಡೆಯುತ್ತಿರುವುದರಿಂದ ನಿಗದಿಗಿಂತ 200 ಮೆಗಾ ವ್ಯಾಟ್ ವಿದ್ಯುತ್ ಕಡಿಮೆ ಪೂರೈಕೆಯಾಗುತ್ತಿದೆ. ಇವೆಲ್ಲದರ ಜತೆಗೆ ಸಾಮಾನ್ಯವಾಗಿ ಸೆಪ್ಟೆಂಬರ್‍ನಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿರುವ ಕಾರಣ ಕೊರತೆ ನೀಗಿಸಲು ಸರಕಾರ ಖರೀದಿಗೆ ಮುಂದಾಗಿದೆ.

Facebook Comments

Sri Raghav

Admin