1,000 ವರ್ಷಗಳಷ್ಟು ಪ್ರಾಚೀನ ಗಣೇಶ ವಿಗ್ರಹವನ್ನು ಭಗ್ನಗೊಳಿಸಿದ ನಕ್ಸಲರು

ಈ ಸುದ್ದಿಯನ್ನು ಶೇರ್ ಮಾಡಿ

Ganesh-naxul

ರಾಯ್‍ಪುರ್, ಜ.29-ಛತ್ತೀಸ್‍ಗಢದ ನಕ್ಸಲ್ ಪೀಡಿ ದಂತೇವಾಡ ಜಿಲ್ಲೆಯ ಧೋಲ್‍ಕಾಲ್ ಪರ್ವತದ ಮೇಲಿದ್ದ ಸುಮಾರು 1,000 ವರ್ಷಗಳಷ್ಟು ಪ್ರಾಚೀನ ಗಣೇಶ ವಿಗ್ರಹವನ್ನು ನಕ್ಸಲರು ಹಾನಿಗೊಳಿಸಿದ್ದಾರೆ. ಜಖಂಗೊಂಡ ಪ್ರತಿಮೆಯು ಬೆಟ್ಟದ ಕೆಳಗೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಈ ಪ್ರದೇಶಕ್ಕೆ ಅಗಾಗ ಅಧಿಕ ಸಂಖ್ಯೆಯ ಭಕ್ತರು ಮತ್ತು ಪ್ರವಾಸಿಗರು ಭೇಟಿ ನೀಡುತ್ತಿರುವುದರಿಂದ ತಮ್ಮ ಚಟುವಟಿಕೆಗಳಿಗೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕಾಗಿ ನಕ್ಸಲರು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.  ಈ ಕೃತ್ಯದ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ದಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಕಾಮಲೋಚನ್ ಕಶ್ಯಪ್ ತಿಳಿಸಿದ್ದಾರೆ.

Ganesh--01

ಗಣೇಶ ವಿಗ್ರಹದ ದರ್ಶನ ಪಡೆಯಲು ನಿನ್ನೆ ಬೆಟ್ಟಕ್ಕೆ ತೆರಳಿದ ಭಕ್ತರಿಗೆ ಪ್ರತಿಮೆ ನಾಪತ್ತೆಯಾಗಿರುವುದು ಕಂಡುಬಂದಿತು. ಶೋಧ ನಡೆಸಿದಾಗ ಪರ್ವತದ ಇನ್ನೊಂದು ಪಾಶ್ರ್ವದ ಕೆಳಭಾಗದಲ್ಲಿ ಹಾನಿಗೊಂಡ ಪುತ್ಥಳಿ ಗೋಚರಿಸಿತು. ಉನ್ನತ ಪೊಲೀಸ್ ಆಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin