ಕೊರೋನಾ ವೈರಸ್ ಸೋಂಕು ನಿಯಂತ್ರಣಕ್ಕೆ 6 ದಿನಗಳಲ್ಲೇ 1000 ಬೆಡ್ ಆಸ್ಪತ್ರೆ ನಿರ್ಮಾಣ

ಈ ಸುದ್ದಿಯನ್ನು ಶೇರ್ ಮಾಡಿ

ವೂಹಾನ್, ಜ.25- ವಿಶ್ವಾದ್ಯಂತ ಭಾರೀ ಆತಂಕ ಸೃಷ್ಟಿಸಿರುವ ಮಾರಕ ಕೊರೋನಾ ವೈರಾಣು ಸೋಂಕಿನ ಕೇಂದ್ರ ಬಿಂಧುವಾಗಿರುವ ಚೀನಾದ ವೂಹಾನ್‍ನಲ್ಲಿ ಈ ರೋಗ ನಿಯಂತ್ರಿಸಲು ಸಮರೋಪಾದಿಯ ಕಾರ್ಯಚರಣೆ ಮುಂದುವರೆದಿದೆ.

ವೈರಾಣು ಸೋಂಕಿನಿಂದ ನರಳುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ವೂಹಾನ್ ನಗರಿಯಲ್ಲಿ ಕೇವಲ ಆರೇ ದಿನಗಳಲ್ಲಿ ಒಂದು ಸಾವಿರ ಹಾಸಿಗೆಗಳ ಸಾಮಥ್ರ್ಯದ ಸುಸರ್ಜಿತ ಆಸ್ಪತ್ರೆಯನ್ನು ನಿರ್ಮಿಸುವ ಕಾರ್ಯ ನಿನ್ನೆ ರಾತ್ರಿಯಿಂದ ಆರಂಭವಾಗಿದೆ.

ಇದಕ್ಕಾಗಿ ಸಹಸ್ರಾರು ಕಾರ್ಮಿಕರು ಮತ್ತು ನೂರಾರು ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದು, ಫೆ.3ರಂದು ಬೆಳಗ್ಗೆ ಈ ಆಸ್ಪತ್ರೆ ರೋಗಿಗಳಿಗೆ ಚಿಕಿತ್ಸೆಗೆ ಲಭ್ಯವಾಗಲಿದೆ. ವೂಹಾನ್ ಪಟ್ಟಣದ ಖಾಯಿಡಾಂಗ್ ಪ್ರದೇಶದಲ್ಲಿ ಈ ಆಸ್ಪತ್ರೆ ನಿರ್ಮಿಸಲಾಗುತ್ತಿದ್ದು, ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಎರಡರಷ್ಟು ವೇತನ ನೀಡಿ ಆಸ್ಪತ್ರೆಯನ್ನು ನಿರ್ಮಿಸಲಾಗಿತ್ತುದೆ.

2003ರಲ್ಲಿ ಮಾರಕ ಶಾರ್ಸ್ ಸೋಂಕು ವ್ಯಾಪಿಸಿ ಸಾವು-ನೋವಿಗೆ ಕಾರಣವಾಗಿದ್ದ ಸಂದರ್ಭದಲ್ಲೂ ಬೀಜಿಂಗ್ ಹೊರ ವಲಯದಲ್ಲಿ ಕೇವಲ ಒಂದೇ ವಾರದಲ್ಲಿ 7ಸಾವಿರಕ್ಕೂ ಹೆಚ್ಚು ಕಾರ್ಮಿಕರು ಹಗಲು-ರಾತ್ರಿ ಕಾರ್ಯ ನಿರ್ವಹಿಸಿ ಒಂದು ಸಾವಿರ ಹಾಸಿಗೆ ಸಾಮಥ್ರ್ಯದ ಸಕಲ ಸೌಲಭ್ಯದ ಆಸ್ಪತ್ರೆಯನ್ನು ನಿರ್ಮಿಸಿದ್ದರು.

Facebook Comments