ಕೊರೊನಾ 2ನೇ ಅಲೆ ವೇಳೆ 1000 ಕೋಟಿ ಖರ್ಚು ಮಾಡಿರುವ ಬಿಬಿಎಂಪಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.30- ಕೋವಿಡ್ ಎರಡನೆ ಅಲೆಗೆ ಬಿಬಿಎಂಪಿ ಖರ್ಚು ಮಾಡಿರುವ ಹಣ ಬರೋಬ್ಬರಿ ಒಂದು ಸಾವಿರ ಕೋಟಿ ರೂ.ಗಳು. ಪಾಲಿಕೆ ವ್ಯಾಪ್ತಿಯ 198 ವಾರ್ಡ್‍ಗಳಲ್ಲಿ ಕೋವಿಡ್-19 ನಿರ್ವಹಣೆ, ನಿಯಂತ್ರಣಕ್ಕೆ ಒಂದು ಸಾವಿರ ಕೋಟಿ ರೂ. ಖರ್ಚು ಮಾಡಿರುವುದಾಗಿ ಬಿಬಿಎಂಪಿ ಹೇಳಿದೆ.

ವಿದ್ಯುತ್ ಚಿತಾಗಾರಗಳಲ್ಲಿ ಕೋವಿಡ್‍ನಿಂದ ಮೃತಪಟ್ಟವರ ಸಂಸ್ಕಾರಕ್ಕೆ ಸುಮಾರು 88 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದು ಹೇಳಿದೆ.ಕಂಟೋನ್ಮೆಂಟ್ ಝೋನ್‍ಗಳಲ್ಲಿ ಜನರಿಗೆ ಫುಡ್‍ಕಿಟ್ ವಿತರಣೆಗೆ 47 ಕೋಟಿ, 50 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಎರಡನೆ ಅಲೆಯ ಕೋವಿಡ್ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ ಹೋಮ್‍ಗಾರ್ಡ್‍ಗಳಿಗೆ 89 ಲಕ್ಷ ರೂ. ಸಂಬಳ ನೀಡಿದೆಯಂತೆ.

ಗಂಟಲು ದ್ರವ ಪರೀಕ್ಷೆಗೆ ಖಾಸಗಿ ಆಸ್ಪತ್ರೆ ಲ್ಯಾಬ್‍ಗಳಿಗೆ ಆರ್‍ಟಿಪಿಸಿಆರ್ ಟೆಸ್ಟ್‍ಗೆ 219 ಕೋಟಿ ಖರ್ಚಾಗಿದೆ. ಇನ್ನು ಟಿಟಿ, ಆ್ಯಂಬುಲೆನ್ಸ್ ಹಾಗೂ ಅಕಾರಿಗಳ ವಾಹನಗಳ ಬಾಡಿಗೆಗೆ ಸರಿಸುಮಾರು 125 ಕೋಟಿ ರೂ. ವೆಚ್ಚ ಮಾಡಲಾಗಿದೆ.

ಸೀಲ್‍ಡೌನ್, ಕ್ವಾರಂಟೈನ್ ಮಾಡಲು ಮಾಡಿರುವ ವೆಚ್ಚ 346 ಕೋಟಿ ರೂ. ಜತೆಗೆ ಇನ್ನಿತರ ವಸ್ತುಗಳ ಖರೀದಿಗೆ 52 ಕೋಟಿ ರೂ. ಸೇರಿದಂತೆ ಬಿಬಿಎಂಪಿ 821 ಕೋಟಿ ರೂ. ಖರ್ಚಿನ ಲೆಕ್ಕ ಕೊಟ್ಟಿದೆ. ಇನ್ನೂ 200 ಕೋಟಿಯಷ್ಟು ಬಿಲ್ ಬಾಕಿ ಬರಬೇಕಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಿದ್ದಾರೆ. ಇಷ್ಟು ಪ್ರಮಾಣದ ಹಣ ಖರ್ಚಾಗಿದೆಯೇ ಎಂಬ ಸಂಶಯ ವ್ಯಕ್ತವಾಗಿದೆ.

Facebook Comments