10,000 ಕೋಟಿ ಮೊತ್ತದ ಉಭಯಚರ ವಿಮಾನ ಖರೀದಿಗೆ ಭಾರತ ಚಿಂತನೆ
ಈ ಸುದ್ದಿಯನ್ನು ಶೇರ್ ಮಾಡಿ
ನವದೆಹಲಿ, ನ.5- ಜಪಾನ್ನಿಂದ 10ಸಾವಿರ ಕೋಟಿ ರೂ. ಮೌಲ್ಯದ ಉಭಯಚರ ವಿಮಾನಗಳನ್ನು ಹೊಂದುವ ಮಹತ್ವಾಕಾಂಕ್ಷೆ ಯೋಜನೆಗೆ ಭಾರತ ಗಂಭೀರ ಚಿಂತನೆ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು, ಇದೇ 11 ಮತ್ತು 12ರಂದು ಉದಯರವಿ ನಾಡು ಜಪಾನ್ಗೆ ಭೇಟಿ ನೀಡಲಿದ್ದು, ಟೋಕಿಯೋದಿಂದ ಯುಎಸ್-2ಐ ಉಭಯಚರ (ನೀರಿನಲ್ಲಿ ಚಲಿಸುವ ಮತ್ತು ಆಕಾಶದಲ್ಲಿ ಹಾರುವ) ವಿಮಾನಗಳನ್ನು ಖರೀದಿಸುವ ಯೋಜನೆ ಬಗ್ಗೆ ಪ್ರಸ್ತಾಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಮಹತ್ವದ ಯೋಜನೆಗೆ 10ಸಾವಿರ ಕೋಟಿ ರೂ. ವೆಚ್ಚವಾಗಲಿದ್ದು, ಉಭಯ ದೇಶಗಳ ನಡುವೆ ಹೊಸ ಬಾಂಧವ್ಯಕ್ಕೆ ಭದ್ರ ಬುನಾದಿ ಹಾಕಲಿದೆ ಎಂದು ವಿಶ್ಲೇಷಿಸಲಾಗಿದೆ. ಪ್ರಧಾನಿ ಭೇಟಿ ವೇಳೆ ಜಪಾನ್ ದೇಶದ ಅಪತಿಗಳೊಂದಿಗೆ ರಕ್ಷಣೆ, ನಾಗರಿಕ ಪರಮಾಣು ಸಹಕಾರ, ವಾಣಿಜ್ಯೋದ್ಯಮ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ದ್ವಿಪಕ್ಷೀಯ ಸಂಬಂಧಗಳ ಸಮಾಲೋಚನೆ ನಡೆಯಲಿವೆ.
► Follow us on – Facebook / Twitter / Google+
Facebook Comments