103 ಕೋಟಿ ರೂ. ಹಣ ದುರುಪಯೋಗ ಆರೋಪ : ಮುಲಾಯಂಗೆ ಕಂಟಕ

ಈ ಸುದ್ದಿಯನ್ನು ಶೇರ್ ಮಾಡಿ

Mulayam-Singh-Yadav

ನವದೆಹಲಿ, ನ.8- ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಮಾಜಿ ಮುಖ್ಯಮಂತ್ರಿ ಮತ್ತು ಆಡಳಿತರೂಢ ಸಮಾಜವಾದಿ ಪಕ್ಷದ ಪರಮೋಚ್ಚ ನಾಯಕ ಮುಲಾಯಂ ಸಿಂಗ್‍ಗೆ ಹೊಸ ಕಂಟಕವೊಂದು ಎದುರಾಗಿದೆ. ಮುಲಾಯಂ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 2003 ಮತ್ತು 2007ರ ನಡುವೆ ಸರ್ಕಾರದಿಂದ ನಡೆದಿದೆ ಎನ್ನಲಾದ ಹಣಕಾಸು ಅಕ್ರಮಗಳ ಬಗ್ಗೆ ಮಹಾ ಲೇಖಪಾಲರು (ಕಂಟ್ರೋಲರ್ ಅಂಡ್ ಆಡಿಟರ್ ಜನರಲ್-ಸಿಎಜಿ) ಸುಪ್ರೀಂಕೋರ್ಟ್‍ಗೆ ಮಾಹಿತಿ ನೀಡಿದ್ದಾರೆ.  ಉತ್ತರಪ್ರದೇಶದ ಎತವಾ ಜಿಲ್ಲೆಯ ಚೌಧರಿ ಚರಣ್ ಸಿಂಗ್ ಡಿಗ್ರಿ ಕಾಲೇಜಿಗೆ (ಸಿಸಿಎಸ್‍ಡಿಸಿ) 103.92 ಕೋಟಿ ರೂ.ಗಳನ್ನು ಆಗಿನ ಸರ್ಕಾರವು ಸ್ವಇಚ್ಚೆಯಿಂದ ಬಿಡುಗಡೆ ಮಾಡಿ ಹಣದುರ್ಬಳಕೆ ಮಾಡಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದೆ ಎಂದು ಸಿಎಜಿ ಆರೋಪಿಸಿದೆ.

ಬಂಡವಾಳ ಮೂಲಸೌಕರ್ಯ ಸೃಷ್ಟಿಗಾಗಿ ಖಾಸಗಿ ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಅನುದಾನ- ನೆರವು ಒದಗಿಸಲು ಯಾವುದೇ ಸ್ಪಷ್ಟ ಯೋಜನೆಗಳ ಅನುಪಸ್ಥಿತಿಯಲ್ಲಿ ಸಿಸಿಎಸ್‍ಡಿಸಿಗೆ ಆಗಿನ ಮುಲಾಯಂ ಸರ್ಕಾರ ಇಷ್ಟು ದೊಡ್ಡ ಮೊತ್ತದ ಹಣ ಬಿಡುಗಡೆ ಮಾಡಿ ನೀತಿ ನಿಯಮಗಳನ್ನು ಗಾಳಿಗೆ ತೂರಿದೆ ಎಂದು ಸಿಎಜಿ ಸರ್ವೋಚ್ಚ ನ್ಯಾಯಾಲಯಕ್ಕೆ ವಿವರವಾದ ಮಾಹಿತಿ ನೀಡಿದೆ.  ಆದರೆ, ನಿಯಮದಂತೆ ಅಗತ್ಯವಾದ ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಅನುದಾನವನ್ನು ಬಿಡುಗಡೆ ಮಾಡದೇ ಅನಗತ್ಯವಾಗಿ ಸಿಸಿಎಸ್‍ಡಿಸಿಗೆ 103 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ.  ಸಿಎಜಿ ಸಲ್ಲಿಸಿರುವ ವಿವರಗಳನ್ನು ಪರಿಶೀಲಿಸಿ ಸುಪ್ರೀಂಕೋರ್ಟ್ ಸದ್ಯದಲ್ಲೇ ಈ ಬಗ್ಗೆ ಕಾನೂನು ಪ್ರಕ್ರಿಯೆ ಆರಂಭಿಸಲಿದ್ದು, ಮುಲಾಯಂ ಸಿಂಗ್‍ಗೆ ಕಾನೂನು ಚಕ್ರದ ಆತಂಕ ಎದುರಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin