ವಾಷಿಂಗ್ಟನ್‍ನಿಂದ ಬೆಂಗಳೂರಿಗೆ ಬಂದಿಳಿದ 105 ಪ್ರಯಾಣಿಕರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 30-ಅಮೆರಿಕಾದ ವಾಷಿಂಗ್ಟನ್ ನಿಂದ ಇಂದು ಬೆಳಗಿನ ಜಾವ 3.15 ಗಂಟೆಗೆ ಏರ್ ಇಂಡಿಯಾ ವಿಶೇಷ ವಿಮಾನದ ಮೂಲಕ 105 ಮಂದಿ ಅನಿವಾಸಿ ಭಾರತೀಯರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.

ಒಟ್ಟು 105 ಮಂದಿ ಪ್ರಯಾಣಿಕರಲ್ಲಿ ಎರಡು ಮಕ್ಕಳು ಸೇರಿದಂತೆ 54 ಪುರುಷರು ಮತ್ತು 49 ಮಹಿಳೆಯರು ಇದ್ದಾರೆ. ನಂತರ ಏರ್ ಇಂಡಿಯಾ ವಿಮಾನವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗುಜರಾತ್‍ನ ಅಹಮದಾಬಾದ್‍ಗೆ ಇತರ ಪ್ರಯಾಣಿಕರನ್ನು ಕೊಂಡೊಯ್ಯಿತು.

ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳು 105 ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿದ್ದು, ಯಾವುದೇ ಪ್ರಯಾಣಿಕರಲ್ಲಿ ಕೊರೊನಾ ವೈರಾಣು ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.

ಆದರೂ ಇವರೆಲ್ಲರನ್ನೂ 14 ದಿನಗಳ ಕ್ವಾರಂಟೈನ್‍ಗಾಗಿ ಹೋಟೆಲ್ ಗಳಿಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಲಾಗಿದೆ. ನಿನ್ನೆ ಸಂಜೆ ದಕ್ಷಿಣ ಕೊರಿಯಾದ ಸಿಯೋಲ್‍ನಿಂದ 208 ಮಂದಿ ಪ್ರಯಾಣಿಕರು ಆಗಮಿಸಿದ್ದು , ಅವರನ್ನು ಕೂಡ ಆರೋಗ್ಯ ತಪಾಸಣೆ ಮಾಡಿಸಿ ಇರಿಸಲಾಗಿದೆ.

Facebook Comments

Sri Raghav

Admin