106 ವರ್ಷದ ವೃದ್ದೆಗೆ 2,48,000 ಅಭಿಮಾನಿಗಳು…!

ಈ ಸುದ್ದಿಯನ್ನು ಶೇರ್ ಮಾಡಿ

106-Year

ನವದೆಹಲಿ, ಏ.30-ಸಾಧನೆಗೆ ವಯೋಮಾನ ಅಡ್ಡಿಯಾಗದು. ಅಂಧ್ರಪ್ರದೇಶದ ಶತಾಯುಷಿ ಮಸ್ತಾನಮ್ಮ ಇದಕ್ಕೆ ಸಾಕ್ಷಿ. ರುಚಿಕರ ಅಡುಗೆ ಮಾಡುವ ವಿಧಾನ ಹೇಳಿಕೊಡುವ ಇವರು ಇಂಟರ್‍ನೆಟ್ ಕುಕಿಂಗ್ ಸೆನ್ಸೇಷನ್ ಆಗಿದ್ದಾರೆ. ಇವರ ವಯಸ್ಸು 106, ಹುಮ್ಮಸ್ಸು 16. ಯೂಟ್ಯೂಬ್‍ನಲ್ಲಿ ಸಕ್ರಿಯವಾಗಿರುವ ವಿಶ್ವದ ಅತ್ಯಂತ ಹಿರಿಯ ಮಹಿಳೆಯಾಗಿರುವ ಇವರು ಕಂಟ್ರಿ ಫುಡ್ಸ್ ಎಂಬ ಚಾನೆಲ್‍ನ ಹೆಮ್ಮೆಯ ಒಡತಿ.   ಮಸ್ತಾನಮ್ಮ ಅವರಿಗೆ 2,48,000 ಅಭಿಮಾನಿಗಳಿದ್ದಾರೆ. ಯೂಟ್ಯೂಬ್‍ನಲ್ಲಿರುವ ಇವರ ಚಾನೆಲ್‍ಗೆ ದಿನದಿಂದ ದಿನಕ್ಕೆ ಚಂದಾದಾರರ ಸಂಖ್ಯೆ ಏರುತ್ತಲೇ ಇದೆ. ಸಾಂಪ್ರದಾಯಿಕ ಶೈಲಿಯ ಅಡುಗೆ, ಅದರಲ್ಲೂ ನಾನ್‍ವೆಜ್ ಫುಡ್ ಸಿದ್ದಪಡಿಸುವುದರಲ್ಲಿ ಈ ವಯೋವೃದ್ದೆ ಸಿದ್ದಹಸ್ತರು. ರುಚಿಕರ ಮತ್ತು ಸ್ವಾದಿಷ್ಟ ಆಹಾರ ತಯಾರಿಸುವ ನೈಪುಣ್ಯದಿಂದ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಎಗ್ ದೋಸೆ, ಬಂಬೂ ಬಿರಿಯಾನಿ, ಫಿಶ್ ಫ್ರೈ ಮಾಡುವ ವಿಧಾನಗಳನ್ನು ಅವರು ಯೂಟ್ಯೂಬ್ ಚಾನೆಲ್‍ನಲ್ಲಿ ಹೇಳಿಕೊಡುತ್ತಾರೆ.ಮಸ್ತಾನಮ್ಮಳ ಮರಿ ಮೊಮ್ಮಗ ಲಕ್ಷ್ಮಣ್ ಕಂಟ್ರಿ ಫುಡ್ಸ್ ಚಾನೆಲ್ ನೋಡಿಕೊಳ್ಳುತ್ತಿದ್ದಾರೆ. ಒಮ್ಮೆ ನಾನು ಮತ್ತು ನನ್ನ ಸ್ನೇಹಿತರಿಗೆ ತುಂಬಾ ಹಸಿವಾಗಿತ್ತು. ನನ್ನ ಮುತ್ತಜ್ಜಿಯ ಸಹಾಯದಿಂದ ಆಹಾರ ತಯಾರಿಸಿದೆವು. ಅದು ತುಂಬಾ ರುಚಿಕರವಾಗಿತ್ತು. ಯೂಟ್ಯೂಬ್‍ನಲ್ಲಿ ನಾವೇ ಏಕೆ ಒಂದು ಚಾನೆಲ್ ಆರಂಭಿಸಬಾರದು ಎಂಬ ಆಲೋಚನೆ ಹೊಳೆಯಿತು. ನಮ್ಮ ಅಡುಗೆ ತಯಾರಿಕೆಯ ಮೊದಲ ವೀಡಿಯೋ ವೈರಲ್ ಆಯಿತು. ಆಗ ಚಾನೆಲ್ ನಡೆಸಲು ತೀರ್ಮಾನಿಸಿದೆವು. ಇದಕ್ಕೆ ಮುತ್ತಜ್ಜಿ ಸಹಾಯ ಮಾಡಿದರು ಎನ್ನುತ್ತಾರೆ ಲಕ್ಷ್ಮಣ್.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin