ವಲಸಿಗರ ದೋಣಿ ಮುಳುಗಿ 11 ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಸ್ಯಾನ್ ಜುವಾನ್ (ಪೋರ್ಟೊ ರಿಕೊ), ಮೇ 13 -ವಲಸಿಗರನ್ನು ತುಂಬಿದ ದೋಣಿಯೊಂದು ಜನವಸತಿಯಿಲ್ಲದ ಪೋರ್ಟೊ ರಿಕೊ ಬಳಿಯ ದ್ವೀಪದ ಸಮೀಪ ಮಗುಚಿ ಬಿದ್ದಿದ್ದು, 11 ಜನರು ಸಾವನ್ನಪ್ಪಿದ್ದಾರೆ.

ದೋಣಿಯಲ್ಲಿ ಎಷ್ಟು ಜನರು ಇದ್ದರು ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ ಎಂದು ಅಮೆರಿಕ ಕೋಸ್ಟ ಗಾರ್ಡ್ ವಕ್ತಾರ ರಿಕಾರ್ಡೊ ಕ್ಯಾಸ್ಟ್ರೊಡಾಡ್ ಹೇಳಿದ್ದಾರೆ. ರಕ್ಷಣಾ ಕಾರ್ಯಾಚರನೆ ಇನ್ನೂ ನಡೆಯುತ್ತಿದ್ದು, 31 ಜನರನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.

ನಾವು ಎಷ್ಟು ಸಾಧ್ಯವೋ ಅಷ್ಟು ಜನರನ್ನು ರಕ್ಷಿಸಲು ಸತತ ಪ್ರಯತ್ನ ನಡೆದಿದೆ ದೋಣಿಯಲ್ಲಿದ್ದವರ ರಾಷ್ಟ್ರೀಯತೆ ತಕ್ಷಣವೇ ತಿಳಿದಿಲ್ಲ. ಹೈಟಿ ಮತ್ತು ಡೊಮಿನಿಕನ್ ರಿಪಬ್ಲಕ್‍ನಿಂದ ವಲಸಿಗರು ತಮ್ಮ ದೇಶಗಳಲ್ಲಿನ ಹಿಂಸಾಚಾರ ಮತ್ತು ಬಡತನದಿಂದ ಅಮೆರಿಕ ಸೇರಿ ಹಲವು ಪ್ರದೇಶಗಳಿಗೆ ಅಪಾಯಕಾರಿ ದಾರಿ ತುಳಿಯುತ್ತಾರೆ ಎಮದು ಅಧೀಕಾರಿಗಳು ತಿಳಿಸಿದ್ದಾರೆ.

ಯುಎಸ್ ಕಸ್ಟಮ್ಸ್  ಮತ್ತು ಬಾಡರ್ ಪ್ರೊಟೆಕ್ಷನ್‍ಪಡೆಯ ಹೆಲಿಕಾಪ್ಟರ್ ಉರುಳಿಬಿದ್ದ ದೋಣಿಯನ್ನು ಗುರುತಿಸಿದೆ.ಇವರು ಯಾರಿಗೂ ಕಾಣದಿದ್ದರೆ ಲ್ಲರೂ ಸಮುದ್ರ ಪಾಲಾಗುತ್ತಿದ್ದರು ಎಮದು ತಿಳಿಸಿದ್ದಾರೆ. ರಕ್ಷಿಸಲ್ಪಟ್ಟವರಲ್ಲಿ 20 ಪುರುಷರು ಮತ್ತು 11 ಮಹಿಳೆಯರು ಎಂದು ಅಮೆರಿಕ ಕೋಸ್ಟ್ ಗಾರ್ಡ್ ಹೇಳಿದೆ.

Facebook Comments