ಇಂದು ನಿವೃತ್ತಿಯಾಗಲಿದ್ದಾರ ವಿಧಾನ ಪರಿಷತ್ತಿನ 11 ಮಂದಿ ಸದಸ್ಯರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ. 30-ಮಾಜಿ ಸಚಿವ ಹೆಚ.ಎಂ.ರೇವಣ್ಣ, ಮಾಜಿ ಉಪ ಸಭಾಪತಿ ಪುಟ್ಟಣ್ಣ ಸೇರಿದಂತೆ ರಾಜ್ಯ ವಿಧಾನ ಪರಿಷತ್ತಿನ 11 ಮಂದಿ ಸದಸ್ಯರು ಇಂದು ನಿವೃತ್ತಿಯಾಗಲಿದ್ದಾರೆ.

ರಾಜ್ಯ ವಿಧಾನ ಸಭೆಯಿಂದ ವಿಧಾನಪರಿಷತ್ತಿಗೆ ಚುನಾಯಿತರಾಗಿದ್ದ ಸದಸ್ಯರಾದ ಜಯಮ್ಮ, ಎನ್.ಎಸ್. ಬೋಸರಾಜು, ಎಚ್. ಎಂ. ರೇವಣ್ಣ, ಟಿ.ಎ. ಶರವಣ, ಡಿ.ಯು.ಮಲ್ಲಿಕಾರ್ಜುನ, ನಸೀರ್ ಅಹ್ಮದ್, ಎಂ.ಸಿ.ವೇಣುಗೋಪಾಲ್ ಅವರು ನಿವೃತ್ತಿಯಾಗಲಿದ್ದಾರೆ.

ಹಾಗೆಯೇ ಪದವೀಧರ ಕ್ಷೇತ್ರದಿಂದ ಚುನಾಯಿತರಾಗಿದ್ದ ಸದಸ್ಯರಾದ ಆರ್.ಚೌಡರೆಡ್ಡಿ ತೂಪಲ್ಲಿ, ಸುಂಕನೂರ್ ಶಿಕ್ಷಕರ ಕ್ಷೇತ್ರದ ಚುನಾಯಿತ ಸದಸ್ಯರಾಗಿದ್ದ ಪುಟ್ಟಣ್ಣ ಹಾಗೂ ಶರಣಪ್ಪ ಮುಟ್ಟೂರ ಅವರು ಸಹ ನಿವೃತ್ತಿ ಹೊಂದಲಿದ್ದಾರೆ.

ಈಗಾಗಲೇ ವಿಧಾನಸಭೆಯಿಂದ ವಿಧಾನಪರಿಷತ್ತಿನ ಏಳು ಸ್ಥಾನ ಸದಸ್ಯ ಸ್ಥಾನಗಳ ದ್ವೈವಾರ್ಷಿಕ ಚುನಾವಣೆಯನ್ನು ಭಾರತೀಯ ಚುನಾವಣಾ ಆಯೋಗ ನಡೆಸಿದ್ದು ಏಳು ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆಡಳಿತರೂಢ ಬಿಜೆಪಿಯಿಂದ ಮಾಜಿ ಸಚಿವರಾದ ಎಂ.ಟಿ.ಬಿ. ನಾಗರಾಜು, ಆರ್. ಶಂಕರ್, ಪ್ರತಾಪ್ ಸಿಂಹ ನಾಯಕ್ ಹಾಗೂ ಸುನಿಲ್ ವಲ್ಯಾಪುರ್, ಜೆಡಿಎಸ್ ನಿಂದ ಗೋವಿಂದರಾಜು ಕಾಂಗ್ರೆಸ್ ನಿಂದ ಮಾಜಿ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಹಾಗೂ ನಸೀರ್ ಅಹ್ಮದ್ ಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಚುನಾಯಿತ ಸದಸ್ಯರು ಇಂದು ನಿವೃತ್ತಿ ಆಗುತ್ತಿದ್ದರೂ ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ಕ್ಷೇತ್ರಗಳ ಚುನಾವಣೆಯನ್ನು ಮುಂದೂಡಿದೆ.

ಈಗಾಗಲೇ ನಾಮನಿರ್ದೇಶನಗೊಂಡಿದ್ದ ಐವರು ಸದಸ್ಯರು ಜೂ. 23ರಂದು ವಿಧಾನ‌ಪರಿಷತ್ ಸದಸ್ಯ ಸ್ಥಾನದಿಂದ ನಿವೃತ್ತಿಯಾಗಿದ್ದಾರೆ. ಹೀಗಾಗಿ ವಿಧಾನಪರಿಷತ್ತಿನ ಐದು ಸದಸ್ಯ ಸ್ಥಾನಗಳು ಖಾಲಿ ಉಳಿದಿವೆ.

ಈ ಸ್ಥಾನಗಳನ್ನು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವವರನ್ನು ಗುರುತಿಸಿ ರಾಜ್ಯ ಸರ್ಕಾರ ನಾಮ ನಿರ್ದೇಶನ ಮಾಡಲಿದೆ.

Facebook Comments

Sri Raghav

Admin