ರಾಜ್ಯದಲ್ಲಿ ಮತ್ತೆ 11 ಕೊರೋನಾ ಕೇಸ್ ಪತ್ತೆ, 226ಕ್ಕೇರಿದ ಸೋಂಕಿತರ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.12- ರಾಜ್ಯದಲ್ಲಿ ಮತ್ತೆ 11 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 226ಕ್ಕೇರಿಕೆಯಾಗಿದೆ. ಬೆಂಗಳೂರಿನಲ್ಲಿ ಮೂರು, ಬೆಳಗಾವಿಯಲ್ಲಿ ನಾಲ್ಕು, ಕಲ್ಬುರ್ಗಿಯಲ್ಲಿ ಎರಡು, ಮೈಸೂರು, ವಿಜಯಪುರ ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ.

ವಿದೇಶ ಪ್ರವಾಸ ಮಾಡಿ ಸೋಂಕು ಅಂಟಿಸಿಕೊಂಡು ಬಂದಿರುವ ವ್ಯಕ್ತಿಯೊಬ್ಬರು ಇಂದು ಪತ್ತೆಯಾಗಿದ್ದಾರೆ. ಇತ್ತೀಚೆಗೆ ವಿದೇಶದಿಂದ ಬಂದ ಸೋಂಕಿತರ ಸಂಖ್ಯೆ ಕೇಳಿ ಬರುತ್ತಿರಲಿಲ್ಲ. ಆದರೆ ಬೆಂಗಳೂರಿನ 58 ವರ್ಷದ ವ್ಯಕ್ತಿ ಮಾರ್ಚ್ 21 ರಂದು ಇಂಡೋನೇಷಿಯಾ ಪ್ರಯಾಣದಿಂದ ವಾಪಾಸಾಗಿದ್ದರು. ಇಂದು ಅವರಲ್ಲಿ ಸೋಂಕಿರುವುದರನ್ನು ಪ್ರಯೋಗಾಲಯದ ವರದಿ ಸ್ಪಷ್ಟ ಪಡಿಸಿದೆ. ತೀವ್ರ ಉಸಿರಾಟದ ಸಮಸ್ಯೆ ಎದಿರಿಸುತ್ತಿದ್ದ 75 ವರ್ಷದ ಮಹಿಳೆಗೂ ಸೋಂಕು ತಗುಲಿದೆ.

ನಂಜನಗೂಡು ಔಷಧ ಕಾರ್ಖಾನೆಯ ಸಂಓಕಿತ ಸಂಖ್ಯೆ 88ರ ಸಂಪರ್ಕದಿಂದ 32 ವರ್ಷದ ವ್ಯಕ್ತಿಗೆ, ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ವಿಜಯಪುರದ 60 ವರ್ಷದ ಮಹಿಳೆಗೆ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಂಪರ್ಕದಿಂದ ಕಲ್ಬುರ್ಗಿಯಲ್ಲಿ 24 ವರ್ಷದ ಮಹಿಳೆ, 38 ವರ್ಷದ ಮತ್ತೊಬ್ಬ ಮಹಿಳೆ ಸೋಂಕಿಗೆ ಸಿಲುಕಿದ್ದಾರೆ.

ಬೆಳಗಾವಿ ಜಿಲ್ಲೆ ರಾಯಬಾಗದಲ್ಲಿ 19 ವರ್ಷದ ಯುವಕ, 55 ವರ್ಷದ ವ್ಯಕ್ತಿ, 25 ವರ್ಷದ ಯುವಕ, ಹಿರೇಬಾಗೆವಾಡಿಯ 38 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ಸ್ಪಷ್ಟ ಪಡಿಸಿದೆ.

# ಇನ್ನೂ ಜಿಲ್ಲೆವಾರು ಸೋಂಕಿತರ ಮಾಹಿತಿ ಹೀಗಿದೆ:
ಬೆಂಗಳೂರು ನಗರ 76, ಮೈಸೂರು 48, ದಕ್ಷಿಣ ಕನ್ನಡ, ಕಲ್ಬುರ್ಗಿ 12, ಉತ್ತರ ಕನ್ನಡ, ಚಿಕ್ಕಬಳ್ಳಾಪುರದಲ್ಲಿ ತಲಾ 9, ಬಳ್ಳಾರಿಯಲ್ಲಿ 6, ದಾವಣಗೆರೆ, ಉಡುಪಿಯಲ್ಲಿ ತಲಾ 3, ಧಾರವಾಡದಲ್ಲಿ 2, ಬೀದರ್‍ ನಲ್ಲಿ 11, ಬೆಂಗಳೂರು ಗ್ರಾಮಾಂತರದಲ್ಲಿ 4, ಮಂಡ್ಯದಲ್ಲಿ 5 ಮಂದಿ ಸೋಂಕಿತರಿದ್ದಾರೆ. ಈವರೆಗೂ ಚಿಕಿತ್ಸೆ ಪಡೆದು 47 ಮಂದಿ ಬಿಡುಗಡೆಯಾಗಿದ್ದಾರೆ ಎಂದು ಹೆಲ್ತ್ ಬುಲೇಟಿನ್ ತಿಳಿಸಿದೆ.

Facebook Comments

Sri Raghav

Admin