ದಸರಾ ಅಂಬಾರಿ ಹೊರುತ್ತಿದ್ದ ಆನೆ ಅರ್ಜುನನ ಮಾವುತ ದೊಡ್ಡಮಾಸ್ತಿ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

Arjuna

ಮೈಸೂರು, ಆ.11- ಹಲವಾರು ವರ್ಷಗಳಿಂದ ದಸರಾ ಅಂಬಾರಿ ಹೊರುತ್ತಿದ್ದ ಅರ್ಜುನನ ಮಾವುತ ದೊಡ್ಡಮಾಸ್ತಿ (62) ಅನಾರೋಗ್ಯದಿಂದ ಇಂದು ಬೆಳಗಿನ ಜಾವ ಮೃತರಾಗಿದ್ದಾರೆ.  bಬ್ರೈನ್ ಟ್ಯೂಮರ್‍ನಿಂದ ಬಳಲುತ್ತಿದ್ದ ಇವರು ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ, ರಾತ್ರಿ ತೀವ್ರ ಅನಾರೋಗ್ಯ ಕಾಣಿಸಿಕೊಂಡು ಬೆಳಗಿನ ಜಾವ ಸಾವನ್ನಪ್ಪಿದ್ದಾರೆ. ಎಚ್‍ಡಿ ಕೋಟೆಯಲ್ಲಿರುವ ಅರಣ್ಯ ಪ್ರದೇಶದ ಬಳ್ಳೆ ಆನೆ ಅರಣ್ಯ ಕ್ಯಾಂಪ್‍ನಲ್ಲೇ ಇದ್ದು, ಅರ್ಜುನನ್ನು ನೋಡಿಕೊಳ್ಳುತ್ತಿದ್ದರು.  ಕಳೆದ 15-20 ವರ್ಷಗಳಿಂದ ದಸರಾದ ಅರ್ಜುನ ಆನೆಯ ಲಾಲನೆ-ಪಾಲನೆ-ಪೋಷಣೆ ಮಾಡುತ್ತಿದ್ದ ದೊಡ್ಡ ಮಾಸ್ತಿ, ಈ ತುಂಟಾಟದ ಆನೆಯನ್ನು ಇವರು ಬಿಟ್ಟರೆ ಬೇರೆ ಯಾರೂ ನೋಡಿಕೊಳ್ಳಲು ಆಗುತ್ತಿರಲಿಲ್ಲ.

ಕಳೆದ ದಸರಾ ನಂತರ ನಿವೃತ್ತಿ ಹೊಂದಿದ್ದರೂ ಸಹ ಅರಣ್ಯದಲ್ಲೇ ಇದ್ದು, ಅರ್ಜುನನ್ನು ನೋಡಿಕೊಳ್ಳುತ್ತಿದ್ದ ಇವರು ಈ ಬಾರಿಯ ದಸರಾದಲ್ಲೂ ಭಾಗವಹಿಸಲು ನಿರ್ಧರಿಸಿದ್ದರು.   ಮೊದಲಿನಿಂದಲೂ ಅರಣ್ಯದಲ್ಲಿ ಇದ್ದುಕೊಂಡೇ ಅರ್ಜುನನನ್ನು ನೋಡಿಕೊಳ್ಳುತ್ತಿದ್ದ ಇವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದುದರಿಂದ ಇವರ ಮಗ ಸಣ್ಣಪ್ಪ (ಮಹೇಶ) ಅರ್ಜುನನ ಲಾಲನೆ-ಪಾಲನೆ-ಪೋಷಣೆ ಮಾಡುತ್ತಿದ್ದರು.  750ಕೆಜಿ ತೂಕದ ಚಿನ್ನದ ಅಂಬಾರಿ ಹೊರುವ ಅರ್ಜುನನ್ನು ಈ ದಸರಾದಲ್ಲಿ ಯಾರು ಸಂಭಾಳಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

► Follow us on –  Facebook / Twitter  / Google+

Facebook Comments

Sri Raghav

Admin