115 ದಿನಗಳ ನಂತರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹಿಂದಿರುಗಿದ ಮೂವರು ಗಗನಯಾತ್ರಿಗಳು

ಈ ಸುದ್ದಿಯನ್ನು ಶೇರ್ ಮಾಡಿ

iss

ಅಸ್ಟಾನಾ (ಕಜಕ್‍ಸ್ತಾನ), ಅ.30- ಅಂತಾರಾಷ್ಟ್ರೀಯ ಬ್ಯಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‍ಎಸ್) 115 ದಿನಗಳ ಪ್ರಯೋಗ ಕೈಗೊಂಡ ಬಳಿಕ ಮೂವರು ಗಗನಯಾತ್ರಿಗಳು ಇಂದು ಸುರಕ್ಷಿತವಾಗಿ ಹಿಂದಿರುಗಿದ್ದಾರೆ. ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಖಗೋಳ ವಿಜ್ಞಾನಿ ಕೇಟ್ ರುಬಿನ್ಸ್, ರಷ್ಯಾದ ರೋಸ್ ಕಾಸ್ಮೋಸ್‍ನ ಅನಾಟೋಲಿ ಇವಾನಿಶಿನ್ ಮತ್ತು ಜಪಾನ್ ಏರೋಸ್ಪೇಸ್ ಎಕ್ಫ್ಲೋ ರೇಷನ್ ಏಜೆನ್ಸಿಯ ಟಕುಯ ಒನಿಶಿ ಇಂಟರ್‍ನ್ಯಾಷನಲ್ ಸ್ಪೇಸ್ ಸ್ಟೇಷನ್‍ನಿಂದ ಧರೆಗಿಳಿದಿರುವುದನ್ನು ರಷ್ಯಾ ಮಿಷನ್ ಕಂಟ್ರೋಲ್ ದೃಢಪಡಿಸಿದೆ. ಕಕ್ಷೆಯ ಪ್ರಯೋಗಾಲಯದಿಂದ ನೌಕೆ ಮೂಲಕ ಕಜಕ್‍ನ ಈಶಾನ್ಯ ಭಾಗದ ಜೆಜ್‍ಕಜ್ಗನ್‍ನಲ್ಲಿ ಮೂವರು ಗಗನಯಾತ್ರಿಗಳು ಸುರಕ್ಷಿತವಾಗಿ ಬಂದಿಳಿದರು.

1998ರಿಂದಲೂ 28,000ಕಿ.ಮೀ. ದೂರದಲ್ಲಿ ಭೂಮಿಯನ್ನು ಸುತ್ತುತ್ತಿರುವ ಐಎಸ್‍ಎಸ್ ಬಾಹ್ಯಾಕಾಶ ಪ್ರಯೋಗಾಲಯಕ್ಕೆ ಕಳೆದ ಐದು ತಿಂಗಳ ಹಿಂದೆ ತೆರಳಿದ್ದ ಈ ತಂಡವು ಅಂತರಿಕ್ಷದಲ್ಲಿ ಸೂಕ್ಷ್ಮಾಣುಗಳ ಮಾದರಿ ಕುರಿತ ಮಹತ್ವದ ಸಂಶೋಧನೆ ನಡೆಸಿದರು.

► Follow us on –  Facebook / Twitter  / Google+

Facebook Comments

Sri Raghav

Admin