118 ಆ್ಯಪ್ ನಿರ್ಬಂಧ : ಚೀನಾ ಗರಂ

ಈ ಸುದ್ದಿಯನ್ನು ಶೇರ್ ಮಾಡಿ

ಬೀಜಿಂಗ್,ಸೆ.3-ಚೀನಾ ಮೂಲದ 118 ಆ್ಯಪ್‍ಗಳನ್ನು ಭಾರತ ನಿರ್ಬಂಧಿಸಿದ ಕ್ರಮವನ್ನು ನಾವು ಕಟುವಾಗಿ ವಿರೋಧಿಸುತ್ತೇವೆ ಎಂದು ವಾಣಿಜ್ಯ ಸಚಿವಾಲಯದ ವಕ್ತಾರ ಗೋವಾಫಿಂಗ್ ಹೇಳಿದ್ದಾರೆ. ಭಾರತದ ಕ್ರಮಗಳು ಚೀನಾದ ಹೂಡಿಕೆದಾರರು ಮತ್ತು ಸೇವಾ ವಿತರಕರ ಕುರಿತ ಕಾನೂನು ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಭಾರತದ ಹಲವು ರಾಜ್ಯದಲ್ಲಿ ಆ್ಯಂಪ್‍ಗಳನ್ನು ಬಳಸಿ ಡೇಟಾಗಳನ್ನು ಶೇಖರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನಮ್ಮ ದೇಶದ ಉದ್ಯಮಿಗಳು ಹೂಡಿದ್ದ ಬಂಡವಾಳವನ್ನು ಹಿಂತೆಗೆದುಕೊಳ್ಳುವಂತೆ ಮತ್ತು ದೇಶದಿಂದ ಓಡಿಸುವಂತಹ ಕ್ರಮವನ್ನು ಮಾಡಲಾಗುತ್ತಿದೆ. ಇದನ್ನು ನಾವು ತೀಕ್ಷ್ಣವಾಗಿ ಪರಿಗಣಿಸಿದ್ದೇವೆ ಎಂದು ಹೇಳಿದ್ದಾರೆ.

Facebook Comments