12 ಅಪ್ರಾಪ್ತ ಬುಡಕಟ್ಟು ವಿದ್ಯಾರ್ಥಿನಿಯರ ರೇಪ್, ಶಿಕ್ಷಕರೂ ಸೇರಿ 11 ಮಂದಿ ಕಾಮುಕರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

rAPE-00

ಬುಲ್‍ದಾನ, ನ.4- ಮಹಾರಾಷ್ಟ್ರದ ಬುಲ್‍ದಾನದ ನಿನಾದಿ ಆಶ್ರಮ ಶಾಲೆಯಲ್ಲಿ 12 ಅಪ್ರಾಪ್ತ ಬುಡಕಟ್ಟು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ನಡೆದಿರುವ ಹೇಯ ಕೃತ್ಯ ವರದಿಯಾಗಿದೆ. ಈ ಸಂಬಂಧ ಏಳು ಶಿಕ್ಷಕರೂ ಸೇರಿದಂತೆ 11 ಮಂದಿಯನ್ನು ನಿನ್ನೆ ರಾತ್ರಿ ಬಂಧಿಸಲಾಗಿದೆ. ಈ ಕೃತ್ಯ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಇನ್ನಷ್ಟು ವಿದ್ಯಾರ್ಥಿನಿಯರು ಕಾಮುಕರ ಬಲೆಗೆ ಬಿದ್ದಿರುವ ಸಾಧ್ಯತೆಯ ಅತಂಕವಿದೆ.  ಅತ್ಯಾಚಾರಕ್ಕೆ ಒಳಗಾದ 12 ಅಪ್ರಾಪ್ತ ವಿದ್ಯಾರ್ಥಿನಿಯರಲ್ಲಿ, ಮೂವರು 12 ರಿಂದ 14 ವರ್ಷದ ಬಾಲಕಿಯರಾಗಿದ್ದಾರೆ.  ದೀಪಾವಳಿ ಹಬ್ಬಕ್ಕಾಗಿ ತಮ್ಮ ಊರುಗಳಿಗೆ ತೆರಳಿದ್ದ ಬಾಲಕಿಯರು ತಮ್ಮ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣಗಳನ್ನು ಪೋಷಕರಿಗೆ ತಿಳಿಸಿದ್ದಾರೆ. ಇವರಲ್ಲಿ ಕೆಲವರು ಗರ್ಭಿಣಿಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ  ಪೊಲೀಸರು ನಿನಾದಿಯ ಆಶ್ರಮ ಶಾಲೆ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ 11 ಮಂದಿಯನ್ನು ನಿನ್ನೆ ರಾತ್ರಿ ಬಂಧಿಸಲಾಗಿದೆ. ಬಂಧಿತರಲ್ಲಿ ಏಳು ಮಂದಿ ಶಿಕ್ಷಕರಾಗಿರುವುದು ಆತಂಕಕಾರಿ ಸಂಗತಿಯಾಗಿದೆ.

ಈಟನೆ ಬಗ್ಗೆ ತನಿಖೆ ನಡೆಸಲು ಹಿರಿಯ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಈ ಕೃತ್ಯಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಇನ್ನಷ್ಟು ವಿದ್ಯಾರ್ಥಿನಿಯರು ಕಾಮುಕರ ಬಲೆಗೆ ಬಿದ್ದಿರುವ ಸಾಧ್ಯತೆ ಇದ್ದು, ತನಿಖೆ ತೀವ್ರಗೊಂಡಿದೆ.

► Follow us on –  Facebook / Twitter  / Google+

Facebook Comments

Sri Raghav

Admin