12 ಗಂಟೆಗಳ ಕಾರ್ಯಾಚರಣೆ ಅಂತ್ಯ, ಉಗ್ರನನ್ನು ಹೊಡೆದುರುಳಿಸಿದ ಎಟಿಎಸ್, ತಪ್ಪಿದ ಭಾರೀ ವಿಧ್ವಂಸಕ ಕೃತ್ಯ

ಈ ಸುದ್ದಿಯನ್ನು ಶೇರ್ ಮಾಡಿ

Lucknow-encounter

ಲಕ್ನೋ, ಮಾ.8-ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕನನ್ನು ಇಲ್ಲಿಗೆ ಸಮೀಪದ ಕಟ್ಟಡವೊಂದರಲ್ಲಿ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ಪಡೆ (ಎಟಿಎಸ್) ಕಮಾಂಡೋಗಳು ಹೊಡೆದುರುಳಿಸಿದ್ದಾರೆ. ಇದರೊಂದಿಗೆ 12 ಗಂಟೆಗಳ ಸುದೀರ್ಘ ಕಾರ್ಯಾಚರಣೆ ಕೊನೆಗೊಂಡಿದೆ.  ದೇಶದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ವಿನಾಶಕಾರಿ ವಿಧ್ವಂಸಕ ಕೃತ್ಯಗಳನ್ನು ಎಸಗುವ ಅತ್ಯುಗ್ರ ಐಎಸ್ ಭಯೋತ್ಪಾದಕರ ಯತ್ನವನ್ನು ಆರಂಭದಲ್ಲೇ ಚಿವುಟಿ ಹಾಕುವಲ್ಲಿ ಯಶಸ್ವಿಯಾಗಿರುವ ಎಟಿಎಸ್ ರಾಷ್ಟ್ರಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಿದೆ. ದೇಶದೊಳಗೆ ನುಸುಳಿರಬಹುದಾದ ಮತ್ತಷ್ಟು ಉಗ್ರಗಾಮಿಗಳ ಬೇಟೆಯನ್ನು ತೀವ್ರಗೊಳಿಸಿದೆ.

ಭೀಕರ ಗುಂಡಿನ ಚಕಮಕಿ ನಂತರ ಕಟ್ಟಡದಲ್ಲಿ ಅಡಗಿದ್ದ ಉಗ್ರನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಕಮ್ಯಾಂಡೋಗಳು ಬಾಗಿಲನ್ನು ಮುರಿದು ಒಳ ಪ್ರವೇಶಿಸಿದಾಗ ಶಸ್ತ್ರಾಸ್ತ್ರಗಳೊಂದಿಗೆ ಭಯೋತ್ಪಾದಕ ಹತನಾಗಿದ್ದ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ದಲ್ಜಿತ್ ಚೌಧರಿ ಕಾರ್ಯಾಚರಣೇ ತಿಳಿಸಿದ್ದಾರೆ.   ಹತ ಭಯೋತ್ಪಾದಕನನ್ನು ಸೈಫಲ್ಲಾ ಎಂದು ಗುರುತಿಸಲಾಗಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ.   26/11ರ ಮುಂಬೈ ದಾಳಿ, ಪಠಾಣ್‍ಕೋಟ್ ಸೇನಾ ನೆಲೆ ಮೇಲಿನ ಆಕ್ರಮಣದ ನಂತರ ನಡೆದ ಸುದೀರ್ಘ ಕಾರ್ಯಾಚರಣೆ ಇದಾಗಿದೆ.

ಕಟ್ಟಡಲ್ಲಿ ಅವಿತಿಟ್ಟುಕೊಂಡಿದ್ದು ಒಬ್ಬನೇ ಉಗ್ರ. ಅವರ ಜೊತೆ ಇನ್ನೊಬ್ಬ ಭಯೋತ್ಪಾದಕ ಇರಲಿಲ್ಲ. ಇತ ಐಎಸ್ ಭಯೋತ್ಪಾದನೆ ಸಂಘಟನೆ ಜೊತೆ ನಿಕಟ ಸಂಪರ್ಕ ಹೊಂದಿರುವುದು ದೃಢಪಟ್ಟಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.   ಎಟಿಎಸ್ ಕಮಾಂಡೋಗಳು ಶರಣಾಗುವಂತೆ ಸೂಚಿಸಿದ್ದರೂ ಆತ ನಿರಾಕರಿಸಿದ್ದ. ಶರಣಾಗತಿಗೆ ಬದಲು ತಾನು ಹುತಾತ್ಮನಾಗುವುದಾಗಿ ಆತ ಸಾರಿ ಹೇಳಿದ್ದ. ಮೆಣಸಿನ ಬಾಂಬ್ ಬಳಸಿ ಅತ ಹೊರ ಬರುವಂತೆ ಮಾಡಲು ನಡೆದ ಯತ್ನ ಫಲ ನೀಡಿಲಿಲ್ಲ. ನಂತರ ಕಮಾಂಡೋಗಳೊಂದಿಗೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಭಯೋತ್ಪಾದಕ ಹತನಾದ.

ಕಾನ್ಪುರದಲ್ಲಿ ಇಬ್ಬರು ಶಂಕಿತ ಐಎಸ್ ಉಗ್ರರನ್ನು ಬಂಧಿಸಿದ ಕಲವೇ ಗಂಟೆಗಳಲ್ಲಿ ಸೈಫುಲ್ಲಾ ಹಳೆ ಲಕ್ನೋ ನಗರದ ಠಾಕೂರ್‍ಗಂಜ್ ಪ್ರದೇಶದ ಬಾಡಿಗೆ ಮನೆಯೊಂದರಲ್ಲಿ ಇರುವ ಮಾಹಿತಿ ಲಭಿಸಿ ಎಟಿಎಸ್ ಕಮಾಂಡೋಗಳು ಕಾರ್ಯಾಚರಣೆ ನಡೆಸಿದರು.   ಈ ಭಯೋತ್ಪಾದಕ ಕಳೆದ ಎರಡು ತಿಂಗಳುಗಳಿಂದ ಆ ಮನೆಯಲ್ಲಿ ನೆಲೆಸಿದ್ದ ಎಂದು ಎಟಿಎಸ್ ಮಹಾ ನಿರೀಕ್ಷಕ ಅಸೀಮ್ ಅರುಣ್ ತಿಳಿಸಿದ್ದಾರೆ.   ಈ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿಯಲು ಯತ್ನಿಸಲಾಯಿತು. ಅವನನ್ನು ಹೊರಗೆ ಬರುವಂತೆ ಮಾಡಲು ಮೆಣಸಿನ ಪುಡಿಯ ಸ್ಪೋಟಕ (ಚಿಲ್ಲಿ ಬಾಂಬ್) ಸಹ ಬಳಸಲಾಗಿತ್ತು.

ಉ.ಪ್ರ.ಚುನಾವಣೆ ಟಾರ್ಗೆಟ್ :

ಉತ್ತರ ಪ್ರದೇಶ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಭಾರೀ ವಿಧ್ವಂಸಕ ಕೃತ್ಯ ಎಸಗುವ ಮೂಲಕ ಭಾರತದಲ್ಲಿ ತನ್ನ ಹಿಂಸಾತ್ಮಕ ಕ್ರೌರ್ಯದ ಖಾತೆ ತೆರೆಯಲು ಐಎಸ್ ಉಗ್ರರು ಸಂಚು ರೂಪಿಸಿದ್ದರು.   ಉಜ್ಜೈನಿ-ಲಕ್ನೋ ಎಕ್ಸ್‍ಪ್ರೆಸ್‍ನಲ್ಲಿ ಬಾಂಬ್ ಸ್ಫೋಟಿಸಿ 12 ಜನರನ್ನು ಗಾಯಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ಶಂಕಿತ ಐಎಸ್ ಭಯೋತ್ಪಾದಕರನ್ನು ಬಂಧಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin