ಸಮುದ್ರದಲ್ಲಿ ಮುಳುಗುತ್ತಿದ್ದ ಹಡಗಿನಲ್ಲಿದ್ದ 12 ಮಂದಿಯ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.22-ಗುಜರಾತಿನ ಉಮರ್‍ಗಮ್ ಸಮುದ್ರ ತೀರದಲ್ಲಿ ಮುಳುಗಡೆಯಾಗುತ್ತಿದ್ದ ವ್ಯಾಪಾರಿ ಹಡಗಿನಲ್ಲಿದ್ದ 12 ಮಂದಿ ಸಿಬ್ಬಂದಿಗಳನ್ನು ರಕ್ಷಿಸುವಲ್ಲಿ ಭಾರತೀಯ ಕರಾವಳಿ ರಕ್ಷಣಾ ಪಡೆ ಯಶಸ್ವಿಯಾಗಿದೆ. ಮುಳುಗಡೆಯಾಗುತ್ತಿದ್ದ ಹಡಗಿನಲ್ಲಿದ್ದ ಎಲ್ಲಾ 12 ಸಿಬ್ಬಂದಿಗಳನ್ನು ಮತ್ತೊಂದು ವ್ಯಾಪಾರಿ ಹಡಗಿನ ಸಿಬ್ಬಂದಿಗಳ ಸಹಾಯದಿಂದ ರಕ್ಷಿಸಲಾಗಿದೆ.

ಸಮುದ್ರದಲ್ಲಿ ಕಂಚನ್ ವ್ಯಾಪಾರಿ ಹಡಗು ಮುಳುಗಡೆಯಾಗುತ್ತಿದೆ ಎಂಬ ಬಗ್ಗೆ ನಿನ್ನೆ ಮದ್ಯಾಹ್ನ ಬಂದ ಎಂಆರ್‍ಸಿಸಿಗೆ ಬಂದ ಮಾಹಿತಿಯನ್ನಾಧರಿಸಿ ಕಾರ್ಯಚರಣೆ ನಡೆಸಿ ಮುಳುಗುತ್ತಿದ್ದವರನ್ನು ರಕ್ಷಿಸಲಾಗಿದೆ.  ಹಡಗಿಗೆ ಕಲುಷಿತ ಇಂಧನ ಬಳಸಿದ್ದರಿಂದ ಸಮುದ್ರದಲ್ಲಿ ನಿಂತಿದ್ದ ಹಡಗು ಮುಂದೆ ಚಲಿಸಲಾಗದೆ ಮುಳುಗುವ ಹಂತಕ್ಕೆ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Facebook Comments