ಲಾಕ್‍ಡೌನ್ ನಿಯಮ ಉಲ್ಲಂಘಿಸಿದ 10 ಭಾರತೀಯರನ್ನು ಗಡಿಪಾರು ಮಾಡಿದ ಸಿಂಗಾಪುರ

ಈ ಸುದ್ದಿಯನ್ನು ಶೇರ್ ಮಾಡಿ

ಸಿಂಗಾಪುರ,ಜು.14- ಕೊರೋನಾ ನಿಯಮ ಉಲ್ಲಂಘನೆ ಮಾಡಿದ ಆರೋಪದ ಹಿನ್ನಲೆಯಲ್ಲಿ 10 ಮಂದಿ ಭಾರತೀಯರನ್ನು ಸಿಂಗಾಪುರದಿಂದ ಗಡೀಪಾರು ಮಾಡಲಾಗಿದೆ.

ಕೊರೋನಾ ವೈರಸ್ ನಿಯಂತ್ರಣಕ್ಕೆ ಸಿಂಗಾಪುರದಲ್ಲಿ ಏ.7ರಿಂದ ಜೂನ್ 2 ವರೆಗೆ ಲಾಕ್‍ಡೌನ್ ಘೋಷಣೆ ಮಾಡಿತ್ತು. ಈ ಅವಧಿಯಲ್ಲಿ ಮನೆಯಿಂದ ಹೊರ ಬರುವುದಕ್ಕೆ ನಿಷೇಧ ಹೇರಲಾಗಿತ್ತು. ಆದಾಗ್ಯೂ, ಮೇ 5ರಂದು 10 ಭಾರತೀಯರು ಅಪಾಟ್ರ್ಮೆಂಟ್ ಒಂದರಲ್ಲಿ ಸೇರಿದ್ದರು ಎನ್ನಲಾಗಿದೆ.

ಇದು ಅಲ್ಲಿನ ನಿಯಮ ಉಲ್ಲಂಘನೆ ಮಾಡಿದಂತಾಗಿದೆ. ಹೀಗಾಗಿ ಇವರನ್ನು ಗಡೀಪಾರು ಮಾಡಲಾಗಿದೆ. ಅಷ್ಟೇ ಅಲ್ಲ, ಸಿಂಗಾಪುರಕ್ಕೆ ಬರುವುದನ್ನು ಖಾಯಂ ಆಗಿ ನಿಷೇಧ ಮಾಡಲಾಗಿದೆ.

ಕೊರೋನಾ ವೈರಸ್ ನಿಯಂತ್ರಣಕ್ಕೆ ಜಾರಿಗೆ ತಂದ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಆರು ತಿಂಗಳು ಕಾಲ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇರುತ್ತದೆ. ಎರಡನೇ ಬಾರಿಗೆ ನಿಯಮ ಉಲ್ಲಂಘನೆ ಮಾಡಿದರೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

ಸದ್ಯ 10 ಭಾರತೀಯರನ್ನು ಗಡೀಪಾರು ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಅವರನ್ನು ಭಾರತಕ್ಕೆ ಕಳುಹಿಸಲಾಗುತ್ತದೆ. ಅವರು ಮತ್ತೆ ಸಿಂಗಾಪುರಕ್ಕೆ ಬರುವಂತಿಲ್ಲ.

ಅವರ ಪಾಸ್ಗಳನ್ನು ಕ್ಯಾನ್ಸಲ್ ಮಾಡಿದ್ದೇವೆ ಎಂದು ಸಿಂಗಾಪುರ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು, ಭಾರತೀಯರಲ್ಲದೆ, ಚೀನಾ ಸೇರಿ ಅನೇಕ ರಾಷ್ಟ್ರಗಳ ನಾಗರೀಕರಿಗೆ ಸಿಂಗಾಪುರ ಇದೇ ಮಾದರಿಯ ಕ್ರಮ ಕೈಗೊಂಡಿದೆ.

ಸಿಂಗಾಪುರದಲ್ಲಿ ಈ ವರೆಗೆ 45 ಕೊರೋನಾ ಪ್ರಕರಣಗಳು ವರದಿಯಾಗಿವೆ. 26 ಜನರು ಕೊರೋನಾ ವೈರಸ್‍ನಿಂದ ಮೃತಪಟ್ಟಿದ್ದಾರೆ. ಕೊರೋನಾ ಸೋಂಕು ಬಹುತೇಕ ನಿಯಂತ್ರಣಕ್ಕೆ ಬಂದಿದೆ.

Facebook Comments

Sri Raghav

Admin