ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 705ಕ್ಕೆ ಏರಿಕೆ, ಇಂದು 12 ಮಂದಿಗೆ ಪಾಸಿಟಿವ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ರಾಜ್ಯದಲ್ಲಿ ಗುರುವಾರ ಕೊರೊನಾ ಮಹಾಮಾರಿಗೆ ಮತ್ತೊಂದು ಬಲಿಯಾಗಿದ್ದು,ಮತ್ತೆ ಹೊಸದಾಗಿ 12 ಸೋಂಕು ಪ್ರಕರಣಗಳು ಪತ್ತೆಯಾಗಿವೆ.ಇದರಿಂದಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 705ಕ್ಕೆ ಏರಿಕೆಯಾಗಿದೆ.

ದಾವಣಗೆರೆಯ3, ಕಲಬುರಗಿ 3 , ಬಾಗಲಕೋಟೆ 3 ಧಾರವಾಡ,1,ಬೆಂಗಳೂರು1 ಹಾಗೂ ಬೆಳಗಾವಿಯಲ್ಲಿ 1 ಪ್ರಕರಣಗಳು ದೃಡಪಟ್ಟಿವೆ. ದಾವಣಗೆರೆಯಲ್ಲಿ 55 ವರ್ಷದ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದಾರೆ.

ದಯಾಬಿಟಿಸ್ ಮತ್ತು ರಕ್ತದೋತ್ತದಿಂದ ಬಳಲುತ್ತಿದ್ದ 694ರ ಸಂಖ್ಯೆಯ ಈ ಮಹಿಳೆ ದಾವಣಗೆರೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತೀವ್ರ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಈ ಮಹಿಳೆಯ ಸಾವಿನಿಂದ ದಾವಣಗೆರೆ ಜಿಲ್ಲೆಯಲ್ಲಿಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸಾವಿನ ಸಂಖ್ಯೆ 30ಕ್ಕೇರಿಕೆಯಾಗಿದೆ.

ಗುರುವಾರ ಬೆಳಗ್ಗೆ 8 ಪ್ರಕರಣಗಳು ಪತ್ತೆಯಾಗಿದ್ದವು. ದಾವಣಗೆರೆಯಲ್ಲಿ ಮೃತಪಟ್ಟ 55 ವರ್ಷದ ಮಹಿಳೆ, ಜ್ವರದ ಲಕ್ಷಣಗಳನ್ನು ಹೊಂದಿದ್ದ 53 ಹಾಗೂ 40 ವರ್ಷದ ಮಹಿಳೆಯರು, ಕಲಬುರಗಿಯಲ್ಲಿ ಸೋಂಕಿತರ ಸಂಪರ್ಕ ಹೊಂದಿದ್ದ 35 ಹಾಗೂ 36 ವರ್ಷದ ವ್ಯಕ್ತಿಗಳು, ಬೆಳಗಾವಿಯ ಹಿರೇಬಾಗೇವಾಡಿಯ 13 ವರ್ಷದ ಬಾಲಕಿ, ಬೆಂಗಳೂರು ನಗರದ 49 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.

ಸಂಜೆ ವೇಳೆಗೆ ಹೊಸದಾಗಿ 4 ಪ್ರಕರಣಗಳು ಪತ್ತೆಯಾಗಿದ್ದು ಬಾಗಲಕೋಟೆಯಲ್ಲಿ 3 ಮತ್ತು ಧಾರವಾಡದಲ್ಲಿ 1 ಪ್ರಕರಣ ಪತ್ತೆಯಾಗಿದೆ.

ಬಾಗಲಕೋಟೆಯ ಬಾದಾಮಿಯಲ್ಲಿ ಮೂರು ಪ್ರಕರಣಗಳು ದೃಢವಾಗಿದೆ. ಮತ್ತೊಂದು ಪ್ರಕರಣ ಧಾರವಾಡದಲ್ಲಿ ದೃಢಪಟ್ಟಿದೆ.
ಸೋಂಕಿತ ಸಂಖ್ಯೆ 607ರ ಸಂಪರ್ಕದ ಕಾರಣ ಬಾಗಲಕೋಟೆಯ ಬಾದಾಮಿಯಲ್ಲಿ ಮೂವರಿಗೆ ಸೋಂಕು ತಾಗಿದೆ. 55 ವರ್ಷದ ಮಹಿಳೆ, 80 ವರ್ಷದ ವೃದ್ಧೆ ಮತ್ತು 19 ವರ್ಷದ ಯುವತಿಗೆ ಸೋಂಕು ತಾಗಿರುವದು ದೃಢವಾಗಿದೆ.

ಮತ್ತೊಂದು ಪ್ರಕರಣ ಧಾರವಾಡದಲ್ಲಿ ದೃಢವಾಗಿದ್ದು, 35 ವರ್ಷದ ಪುರುಷನಿಗೆ ಸೋಂಕು ತಾಗಿರುವುದು ದೃಢವಾಗಿದೆ.ದಾವಣಗೆರೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಸೋಂಕಿತರ ಸಂಖ್ಯೆ 48ಕ್ಕೇರಿಕೆಯಾಗಿದೆ. ಬೆಂಗಳೂರಿನಲ್ಲಿ 156ರಷ್ಟಾಗಿದೆ. ಕಲ್ಬುರ್ಗಿಯಲ್ಲಿ 67, ಬೆಳಗಾವಿಯಲ್ಲಿ 72ರಷ್ಟಾಗಿದೆ.

ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 705ಕ್ಕೆ ಏರಿಕೆಯಾಗಿದೆ. ಇದರಲ್ಲಿ 30 ಜನ ಸೋಂಕಿತರು ಸಾವನ್ನಪ್ಪಿದರೆ, 366 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Facebook Comments

Sri Raghav

Admin