ಕಾಂಗ್ರೆಸ್ ಬಿಟ್ಟು ಟಿಎಂಸಿ ಸೇರಿದ 11ಕ್ಕೂ ಹೆಚ್ಚು ಶಾಸಕರು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ: ನ.25-ಮೇಘಾಲಯದ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಸೇರಿದಂತೆ 11ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ತೃಣಮೂಲ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ, ಈಶಾನ್ಯದಲ್ಲಿ ರಾಜ್ಯದಲ್ಲಿ ನಡೆದ ಅಚ್ಚರಿ ಬೆಳವಣಿಗೆಯಲ್ಲಿ ಕಾಂಗ್ರೇಸ್‍ನ 17 ಶಾಸಕರಲ್ಲಿ ಬಂಡಾಯ ಎದ್ದು ರಾಜಕೀಯ ತಂತ್ರಗಾರಿಕೆಯಲ್ಲಿ 11 ಶಾಸಕರು ಟಿಎಂಸಿ ಸೇರಿದ್ದಾರೆ.

ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ವಿಧಾನಸಭೆ ಸ್ಪೀಕರ್ ಮೆಟ್ಬಾ ಲಿಂಗ್ಡೋಹ್ ಅವರಿಗೆ ಪತ್ರವನ್ನು ಸಲ್ಲಿಸಿದ್ದು, ತಮ್ಮ ಸ್ಥಾನಮಾನದ ಬದಲಾವಣೆಯ ಬಗ್ಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ತೃಣಮೂಲ ಕಾಂಗ್ರೆಸ್ ಅನ್ನು ಮೇಘಾಲಯ ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷವನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಲಾಗಿದೆ.

ಕಾಂಗ್ರೆಸ್ ನಾಯಕರಾಗಿದ್ದ ಕೀರ್ತಿ ಆಜಾದ್ ಮತ್ತು ಅಶೋಕ್ ತನ್ವಾರ್ ಮತ್ತು ಹಿಂದೆ ಜನತಾ ದಳ (ಯು) ನ ಪವನ್ ವರ್ಮಾ ದೆಹಲಿಯಲ್ಲಿ ತೃಣಮೂಲ ಕಾಂಗ್ರೆಸ್ ಸೇರಿದ ಒಂದು ದಿನದ ನಂತರ ಮೇಘಾಲಯದಲ್ಲಿ ಕಾಂಗ್ರೇಸ್‍ಗೆ ದೊಡ್ಡ ಆಘಾತವಾಗಿದೆ ಬಿಜೆಪಿ ವಿರುದ್ಧ ಯುದ್ಧದಲ್ಲಿ ಸೇರಲು ಬಯಸುವ ಇತರ ಪಕ್ಷಗಳ ರಾಜಕೀಯ ನಾಯಕರನ್ನು ತಮ್ಮ ಪಕ್ಷ ತೃಣಮೂಲ ಕಾಂಗ್ರೆಸ್‍ಗೆ ಸ್ವಾಗತಿಸುತ್ತೇವೆ ಎಂದು ಪಶ್ಚಿಮ ಬಂಗಾಳ ಚಿಎಂ ಬ್ಯಾನರ್ಜಿ ಹೇಳಿದ್ದರು.

ಅಸ್ಸಾಂ, ಗೋವಾ, ಉತ್ತರ ಪ್ರದೇಶ, ಬಿಹಾರ ಮತ್ತು ಹರಿಯಾಣದಲ್ಲಿ ನಡೆಯಲಿರುವ ಚುನಾವಣೆ ಮುನ್ನವೇ ಈ ಬೆಳವಣಿಗೆ ಕಾಂಗ್ರೆಸ್‍ಗೆ ಭಾರಿ ಪೆಟ್ಟು ನೀಡಿದೆ. ಸೋನಿಯಾ ಗಾಂಧಿ ಅವರೊಂದಿಗೆ ಸೌಹಾರ್ದ ಸಂಬಂಧವನ್ನು ಹಂಚಿಕೊಳ್ಳಲು ಹೆಸರುವಾಸಿಯಾದ ಬ್ಯಾನರ್ಜಿ ಅವರು ಈ ಬಾರಿ ಅವರನ್ನು ಭೇಟಿ ಮಾಡಿಲ್ಲ, ನಾವು ಪ್ರತಿ ಬಾರಿ ಸೋನಿಯಾ ಅವರನ್ನು ಏಕೆ ಭೇಟಿಯಾಗಬೇಕು? ಇದು ಸಾಂವಿಧಾನಿಕವಾಗಿ ಕಡ್ಡಾಯವಾಗಿಲ್ಲ ಎಂದು ನಾಯಕರು ಹೇಳುತ್ತಿದ್ದಾರೆ.

ಕಾಂಗ್ರೆಸ್ ಹಡಗಿನಿಂದ ಹಾರಿದ 1ಡಜನ್ ಶಾಸಕರು ಮಧ್ಯಾಹ್ನ ಮೇಘಾಲಯದ ರಾಜಧಾನಿ ಶಿಲ್ಲಾ0ಗ್‍ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Facebook Comments