ದೆಹಲಿಯಲ್ಲಿ 12 ಮಂದಿಗೆ ಓಮಿಕ್ರಾನ್..?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.3- ಕರ್ನಾಟಕದಲ್ಲಿ ಇಬ್ಬರಿಗೆ ಓಮಿಕ್ರಾನ್ ಸೋಂಕು ಪತ್ತೆಯಾದ ಬೆನ್ನಲ್ಲೆ ದೆಹಲಿಯಲ್ಲಿ 12 ಮಂದಿ ಶಂಕಿತರು ಆಸ್ಪತ್ರೆಗೆ ದಾಖಲಾಗಿದ್ದಾರೆ. ದೆಹಲಿಯ ಲೋಕನಾಯಕ ಜೈಪ್ರಕಾಶ್ ನಾರಾಯಣ ಆಸ್ಪತ್ರೆಗೆ ನಿನ್ನೆ ಎಂಟು ಮಂದಿ ದಾಖಲಾಗಿದ್ದರು, ಇಂದು ಹೊಸದಾಗಿ ನಾಲ್ಕು ಮಂದಿ ಆಸ್ಪತ್ರೆ ಸೇರಿದ್ದಾರೆ.

ಇವರಲ್ಲಿ ಎಲ್ಲರಿಗೂ ಕೊರೊನಾ ಸೋಂಕು ಇರುವುದು ದೃಢ ಪಟ್ಟಿದೆ. ಓಮಿಕ್ರಾನ್ ಸೋಂಕು ಇದೆಯೇ ಇಲ್ಲವೇ ಎಂಬುದರ ಪರಿಶೀಲನೆಗೆ ಶಂಕಿತರ ಮಾದರಿಗಳನ್ನು ಜಿನೋಮೆ ಸಿಕ್ವೆನ್ಸಿಂಗ್ ಪ್ರರೀಕ್ಷೆಗೆ ರವಾನೆ ಮಾಡಲಾಗಿದೆ.

ಶಂಕಿತರ ಪೈಕಿ ಇಬ್ಬರು ಇಂಗ್ಲೆಂಡ್‍ನಿಂದ, ಒಬ್ಬರು ಪ್ರಾನ್ಸ್‍ನಿಂದ ಮತ್ತೊಬ್ಬರು ನೆದರ್‍ಲ್ಯಾಂಡ್‍ನಿಂದ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕರ್ನಾಟಕದ ಇಬ್ಬರಲ್ಲಿ ಓಮಿಕ್ರಾನ್ ಇರುವುದು ನಿನ್ನೆ ಪತ್ತೆಯಾಗಿತ್ತು. ಅವರಲ್ಲಿ ಒಬ್ಬರು ದಕ್ಷಿಣ ಆಫ್ರಿಕಾದಿಂದ ಬಂದವರಾಗಿದ್ದರು, ಮತ್ತೊಬ್ಬರು ಎಲ್ಲಿಗೂ ಪ್ರಯಾಣ ಮಾಡದೇ ಇದ್ದರೂ ಸೋಂಕಿಗೆ ಸಿಲುಕಿದ್ದರು.

ನವೆಂಬರ್ 25ರಂದು ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡ ರೂಪಾಂತರಿ ಓಮಿಕ್ರಾನ್ ಹಂತ ಹಂತವಾಗಿ ಹರಡುತ್ತಿದ್ದು, ಈವರೆಗೂ ಜಗತ್ತಿನ 30ಕ್ಕೂ ಹೆಚ್ಚು ದೇಶಗಳನ್ನು ವ್ಯಾಪಿಸಿದೆ.

Facebook Comments