ಶಿಮ್ಲಾ ಕಟ್ಟಡ ಕುಸಿತ ದುರಂತ : ಯೋಧರೂ ಸೇರಿ ಮೃತರ ಸಂಖ್ಯೆ 13 ಕ್ಕೇರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಶಿಮ್ಲಾ, ಜು. 15- ಭಾರೀ ಮಳೆಯಿಂದ ಹಿಮಾಚಲಪ್ರದೇಶದ ರಾಜಧಾನಿ ಶಿಮ್ಲಾ ಸಮೀಪದ ಸೋಲಾನ್‍ನಲ್ಲಿ 4 ಅಂತಸ್ತುಗಳ ಕಟ್ಟಡ ಕುಸಿದು 12 ಯೋಧರೂ ಸೇರಿದಂತೆ 13 ಮಂದಿ ಮೃತಪಟ್ಟು ಇತರ 28 ಜನರು ಗಾಯಗೊಂಡಿದ್ದಾರೆ. ಸೋಲಾನ್‍ನ ನಹನ್‍ಕುಮಾರ್ ಹಟ್ಟಿ ರಸ್ತೆಯಲ್ಲಿನ ಈ ಕಟ್ಟಡ ನಿನ್ನೆ ರಾತ್ರಿ ಕುಸಿದು ಬಿತ್ತು.

ರೆಸ್ಟೊರೆಂಟ್ ಸೇರಿದಂತೆ 4  ಮಹಡಿಗಳು ಈ ಕಟ್ಟಡದಲ್ಲಿದ್ದವು. ಈ ದುರ್ಘಟನೆಯಲ್ಲಿ 12 ಯೋಧರು ಮತ್ತು ಓರ್ವ ನಾಗರಿಕ ಮೃತಪಟ್ಟಿದ್ದಾನೆ. ಸೋಲಾನ್ ಪೊಲೀಸ್ ವರಿಷ್ಠಾಧಿಕಾರಿ ಮಧುಸೂಧನ್ ತಿಳಿಸಿದ್ದಾರೆ.

ಕುಸಿದ ಕಟ್ಟಡದ ಭಗ್ನವಶೇಷದಲ್ಲಿ ಇನ್ನೂ ಕೆಲ ಮಂದಿ ಸಿಲುಕಿರುವ ಶಂಕೆಯಿದ್ದು, ಅವರ ರಕ್ಷಣೆ ಕಾರ್ಯಾಚರಣೆ ಮುಂದುವರೆದಿದೆ ಎಂದು ಸೋಲಾನ್ ಉಪವಿಭಾಗೀಯ ದಂಡಾಧಿಕಾರಿ ರೋಹಿತ್ ರಾಥೋಡ್ ತಿಳಿಸಿದ್ದಾರೆ.ಕಟ್ಟಡ ಕುಸಿದು ಬಿದ್ದ  ಸಂದರ್ಭದಲ್ಲಿ 42ಕ್ಕೂ ಹೆಚ್ಚು ಮಂದಿ ಅಲ್ಲಿದ್ದರು.

7 ಜನ ಮೃತಪಟ್ಟಿದ್ದು, ಇನ್ನು ಕೆಲ ಯೋಧರು ಸೇರಿದಂತೆ 28 ಜನರನ್ನು ರಕ್ಷಿಸಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಸಿ.ಚಮನ್ ತಿಳಿಸಿದ್ದಾರೆ.

ಭಗ್ನವಶೇಷಗಳಿಂದ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಭೂಸೇನೆ, ಸ್ಥಳೀಯ ಪೊಲೀಸರು ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣೆ ತಂಡ (ಎನ್‍ಡಿಆರ್‍ಎಫ್) ಕುಸಿದ ಕಟ್ಟಡದ ಅವಶೇಷಗಳನ್ನು ತೆರವು ಕಾರ್ಯಾಚರಣೆಯಲ್ಲಿ ಶ್ರಮಿಸಿದರು

Facebook Comments