ಮಹಾರಾಷ್ಟ್ರದಲ್ಲಿ ಕೊರೋನಾಗೆ 1,200 ಮಂದಿ ಸಾವು, 33,000 ಜನರಿಗೆ ಸೋಂಕು

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಮೇ 18-ಮಹಾರಾಷ್ಟ್ರ ಕಿಲ್ಲರ್ ಕೊರೊನಾ ವೈರಸ್ ದಾಳಿಯಿಂದ ತತ್ತರಿಸಿದೆ. ದೇಶದಲ್ಲೇ ಅತಿ ಹೆಚ್ಚು ಸಾವು ಮತ್ತು ಸೋಂಕು ಪ್ರಕರಣಗಳು ವರದಿಯಾಗಿರುವ ರಾಜ್ಯದಲ್ಲ ಹೆಮ್ಮಾರಿ ದಾಳಿ ಆತಂಕಕಾರಿ ಮಟ್ಟದಲ್ಲಿ ಮುಂದುವರಿದಿದ್ದು, ದಿನೇ ದಿನೇ ಮೃತರು ಮತ್ತು ಸೋಂಕಿತರ ಪ್ರಕರಣ ಹೆಚ್ಚಾಗುತ್ತಲೇ ಇದೆ.

ಕೋವಿಡ್-19ನ ಮೋಸ್ಟ್ ಡೇಂಜರ್ ಝೋನ್ ಎಂದೇ ಗುರುತಿಸಲ್ಪಟ್ಟಿರುವ ಮಹಾರಾಷ್ಟ್ರದಲ್ಲಿ ಸಾವಿನ ಸಂಖ್ಯೆ 1,200 ದಾಟಿದ್ದು, ರೋಗ ಪೀಡಿತರ ಸಂಖ್ಯೆ 33,050 ಮೀರಿದೆ. ದೇಶದ ವಾಣಿಜ್ಯ ನಗರ ಮೂಂಬೈನಲ್ಲಿ ಸೋಂಕಿತರ ಸಂಖ್ಯೆ 20,000 ಸನಿಹಯದಲ್ಲಿರುವುದು ಕಳವಳಕಾರಿಯಾಗಿದೆ.

ಕೇವಲ 24 ತಾಸುಗಳ ಅವಧಿಯಲ್ಲಿ ರಾಜ್ಯದಲ್ಲಿ 63 ಮಂದಿ ಸಾವನ್ನಪ್ಪಿದ್ದು, 1,700ಕ್ಕೂ ಹೆಚ್ಚು ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಸಾಂಕ್ರಾಮಿಕ ರೋಗ ಪೀಡಿತರ ಸಂಖ್ಯೆ 33,056ಕ್ಕೇರಿದೆ ಎಂದು ಆರೋಗ್ಯ ಇಲಾಖೆಯ ಅಧಿಕೃತ ಅಂಕಿ-ಅಂಶ ತಿಳಿಸಿದೆ.
ಮುಂಬೈನಲ್ಲಿ ಸಾವು ಮತ್ತು ಸೋಂಕಿನ ಸಂಖ್ಯೆಯೂ ಆಘಾತಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಲೇ ಇದೆ.

Facebook Comments

Sri Raghav

Admin