125 ಐಎಸ್ ಉಗ್ರರನ್ನು ಕೊಂದು ಮೊಸುಲ್’ನ 2 ಪಟ್ಟಣಗಳನ್ನು ವಶಕ್ಕೆ ಪಡೆದ ಇರಾಕಿ ಸೇನಾಪಡೆ

ಈ ಸುದ್ದಿಯನ್ನು ಶೇರ್ ಮಾಡಿ

ISIs-irq

ಮಸೂಲ್, ಜ.12-ಜಗತ್ತಿನ ಅತ್ಯುಗ್ರ ಭಯೋತ್ಪಾದಕರಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರ ಮೇಲೆ ದಾಳಿಯನ್ನು ತೀವ್ರಗೊಳಿಸಿರುವ ಇರಾಕಿ ಸೇನಾಪಡೆಗಳು 125ಕ್ಕೂ ಹೆಚ್ಚು ಬಂಡುಕೋರರನ್ನು ಕೊಂದು, ಮೊಸುಲ್ ನಗರದ ಎರಡು ಪಟ್ಟಣಗಳ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಸಫಲರಾಗಿದ್ದಾರೆ.  ಮೊಸುಲ್ ನಗರದ ಪೂರ್ವ ಮುಂಚೂಣಿ ಪ್ರದೇಶದ ಅಲ್ ಸುಕರ್ ಪಟ್ಟಣ ಮತ್ತು ಅದರ ಸುತ್ತಮುತ್ತಲ ಸ್ಥಳಗಳ ಮೇಲೆ ಮುಗಿಬಿದ್ದ ಭಯೋತ್ಪಾದನೆ ನಿಗ್ರಹ ಪಡೆಗಳು 125 ಐಎಸ್ ಉಗ್ರರನ್ನು ಹೊಸಕಿ ಹಾಕಿದ್ದಾರೆ ಎಂದು ಹಿರಿಯ ಕಮಾಂಡರ್ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಮಿತ್ರಪಡೆಗಳ ಸಹಕಾರದೊಂದಿಗೆ ನಡೆದ ಈ ಮಹತ್ವದ ಕಾರ್ಯಾಚರಣೆಯಲ್ಲಿ ಯೋಧರು ಐಎಸ್‍ನ ಮಾರ್ಟರ್ ಲಾಂಚರ್ ಮತ್ತು ಕಾರ್ ಬಾಂಬ್ ಸಿದ್ದತೆ ತಾಣಗಳನ್ನು ಧ್ವಂಸಗೊಳಿಸಿದ್ದಾರೆ.

ಮೊಸುಲ್‍ನನ್ನು ಐಎಸ್ ಭಯೋತ್ಪಾದಕರ ಹಿಡಿತದಿಂದ ಮರು ವಶಪಡಿಸಿಕೊಂಡಿರುವ ಇರಾಕಿ ಪಡೆಗಳು ಈ ಪಟ್ಟಣಗಳ ಮೇಲೂ ಮೇಲುಗೈ ಸಾಧಿಸಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಬಹುತೇಕ ಪ್ರದೇಶಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ಸದ್ದಡಗಿದೆ ಎಂದು ಉನ್ನತ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin