ಟೀಂ ಇಂಡಿಯಾಗೆ ಕೊಹ್ಲಿ ಎಂಟ್ರಿ ಕೊಟ್ಟು ಇಂದಿಗೆ 12 ವರ್ಷ, ಬಿಸಿಸಿಐ ಗುಣಗಾನ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಆ.18- ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಜೀವನಕ್ಕೆ ಪಾದಾರ್ಪಣೆ ಮಾಡಿ ಇಂದಿಗೆ 12 ವರ್ಷಗಳು ಪೂರೈಸಿರುವುದರಿಂದ ಬಿಸಿಸಿಐ ಆಡಳಿತ ಮಂಡಳಿ ಕೊಹ್ಲಿಗೆ ಶುಭಾಶಯ ಕೋರಿದ್ದಾರೆ.

ಅಂಡರ್ 19 ವಿಶ್ವಚಾಂಪಿಯನ್ ನಾಯಕನಾಗಿದ್ದ ವಿರಾಟ್ ಕೊಹ್ಲಿ 2008, ಆಗಸ್ಟ್ 12 ರಂದು ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯ ಆಡುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿ ಇಡೀ ವಿಶ್ವವೇ ತಿರುಗಿ ನೋಡುವಂತ ಸಾಧನೆಯನ್ನು ಮಾಡಿದ್ದಾರೆ ಎಂದು ಬಿಸಿಸಿಐ ವಿರಾಟ್ ಕೊಹ್ಲಿಯ ಗುಣಗಾನ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಆಡಿದ ಮೊದಲ ಪಂದ್ಯದಲ್ಲೇ ಲಸಿತ್‍ಮಾಲಿಂಗ, ಕುಲಶೇಖರ್‍ರಂತಹ ಶ್ರೇಷ್ಠ ಬೌಲರ್‍ಗಳನ್ನು ಎದುರಿಸುವ ಅಗ್ನಿಪರೀಕ್ಷೆಗೆ ಒಳಗಾಗಿದ್ದರು. ಕೊಹ್ಲಿ ಅಂದಿನ ಪಂದ್ಯದಲ್ಲಿ ಕೇವಲ 12 ರನ್ ಗಳಿಸಿ ನುವಾನ್ ಕುಲಶೇಖರ ಬೌಲಿಂಗ್‍ನಲ್ಲಿ ಔಟಾಗದಿದ್ದರು, ಈ ನಡುವೆಯೇ ವಿರಾಟ್ ಕೊಹ್ಲಿಯ ಆಯ್ಕೆಯ ಬಗ್ಗೆ ಪ್ರಶ್ನೆಗಳು ಎದ್ದಿದ್ದವು.

ಆದರೆ ಟೀಕೆಗಳನ್ನೇ ಮೆಟ್ಟಿಲಾಗಿಸಿ ಕೊಂಡ ವಿರಾಟ್ ಕೊಹ್ಲಿ ತಮ್ಮ 14ನೇ ಪಂದ್ಯದಲ್ಲೇ ಶ್ರೀಲಂಕಾ ವಿರುದ್ಧ ಈಡನ್‍ಗಾರ್ಡನ್‍ನಲ್ಲಿ ಚೊಚ್ಚಲ ಶತಕ (109 ರನ್) ಗಳಿಸಿ ತಮ್ಮ ಸಾಮಥ್ರ್ಯವನ್ನು ಪ್ರದರ್ಶಿಸಿದ ಕೊಹ್ಲಿ ನಂತರ ತಂಡದ ಪ್ರಮುಖ ಬ್ಯಾಟ್ಸ್‍ಮನ್ ಆಗಿ, ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸುವ ಮೂಲಕ ವಿಶ್ವ ಕ್ರಿಕೆಟ್‍ನಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿದ್ದಾರೆ.

ಏಕದಿನ ಕ್ರಿಕೆಟ್‍ನಲ್ಲಿ 43, ಟೆಸ್ಟ್‍ನಲ್ಲಿ 27 ಶತಕಗಳನ್ನು ಗಳಿಸಿರುವ ವಿರಾಟ್ ಕೊಹ್ಲಿ ಏಕದಿನದಲ್ಲಿ 11867 ರನ್, ಟೆಸ್ಟ್‍ನಲ್ಲಿ 7240 ರನ್ ಹಾಗೂ ಚುಟುಕು ಕ್ರಿಕೆಟ್‍ನಲ್ಲಿ 2794 ರನ್‍ಗಳನ್ನು ಗಳಿಸಿದ್ದಾರೆ.

ಐಪಿಎಲ್‍ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿರುವ ವಿರಾಟ್ ಕೊಹ್ಲಿ 5412 ರನ್‍ಗಳನ್ನು ಗಳಿಸಿದ್ದು ಸೆಪ್ಟೆಂಬರ್ 19ರಿಂದ ನಡೆಯುವ 13ನೇ ಐಪಿಎಲ್‍ನಲ್ಲಿ ಆರ್‍ಸಿಬಿಯನ್ನು ಚಾಂಪಿಯನ್ಸ್ ಆಗಿಸುವ ಗುರಿ ಹೊಂದಿದ್ದಾರೆ.

Facebook Comments

Sri Raghav

Admin