ಚಿನ್ನದ ಗಣಿಯೊಂದರ ಬಳಿ ಅಣೆಕಟ್ಟು ಕುಸಿದು 13 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಮಾಸ್ಕೋ, :  ರಷ್ಯಾ ಮತ್ತು ಸರ್ಬಿಯಾ ಗಡಿ ಪ್ರದೇಶದಲ್ಲಿ ಚಿನ್ನದ ಗಣಿಯೊಂದರ ಅಣೆಕಟ್ಟು ಒಡೆದು 13 ಕಾರ್ಮಿಕರು ಮೃತಪಟ್ಟಿದ್ದಾರೆ. ಈ ದುರ್ಘಟನೆಯಲ್ಲಿ 10 ಮಂದಿ ಕಣ್ಮರೆಯಾಗಿದ್ದು , ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ರಷ್ಯಾದ ಕ್ರಾಸ್‍ನೊಯಾಕ್ರ್ಸ್ ಪ್ರಾಂತ್ಯದಲ್ಲಿ ಇಂದು ಮುಂಜಾನೆ ಸೀಬಾ ನದಿಯ ಅಣೆಕಟ್ಟು ಕುಸಿದು ಪ್ರವಾಹದ ನೀರು ಸಮೀಪದ ಚಿನ್ನದ ಗಣಿಗೆ ನುಗ್ಗಿತು.

ಗಣಿ ಸಮೀಪದ ಕ್ಯಾಬಿನ್‍ಗಳಲ್ಲಿದ್ದ 13 ಮಂದಿ ನೀರಿನಲ್ಲಿ ಕೊಚ್ಚಿ ಹೋದರು ಎಂದು ರಷ್ಯಾ ತುರ್ತು ಪರಿಸ್ಥಿತಿ ಸಚಿವಾಲಯ ತಿಳಿಸಿದೆ. ಈ ದುರ್ಘಟನೆಯಲ್ಲಿ 10 ಮಂದಿ ನಾಪತ್ತೆಯಾಗಿದ್ದಾರೆ. 14 ಜನರನ್ನು ರಕ್ಷಿಸಲಾಗಿದೆ ಎಂದು ಪ್ರಾಂತೀಯ ಗೌರ್ನರ್ ಅಲೆಗ್ಸಾಂಡರ್ ಅಸ್ ತಿಳಿಸಿದ್ದಾರೆ. ನಾಪತ್ತೆಯಾದವರಿಗಾಗಿ ಸುಮಾ ರು 300 ರಕ್ಷಣಾ ಕಾರ್ಯ ಕರ್ತರು ಆ ಪ್ರದೇಶದಲ್ಲಿ ತೀವ್ರ ಶೋಧ ನಡೆಸುತ್ತಿದ್ದಾರೆ.

ಸೀಬಾ ನದಿಗೆ ಅಡ್ಡಲಾಗಿ ಕಟ್ಟಿದ್ದ ಅಣೆಕಟ್ಟು ಬಹು ಹಳೆಯದ್ದು. ಇದರ ಒಂದು ಭಾಗ ಶಿಥಿಲಾವಸ್ಥೆಯಲ್ಲಿತ್ತು. ಈ ಬಗ್ಗೆ ಪ್ರಾಂತೀಯ ಆಡಳಿತಕ್ಕೆ ತಿಳಿಸಿ ಮುನ್ನೆಚ್ಚರಿಕೆ ನೀಡಿದ್ದರೂ ಅದನ್ನು ದುರಸ್ತಿಗೊಳಿಸುವ ಕ್ರಮ ಕೈಗೊಳ್ಳಲಿಲ್ಲ.

Facebook Comments