ದ್ವಿಚಕ್ರ ಚೋರನ ಬಂಧನ : 5 ಲಕ್ಷ ಮೌಲ್ಯದ 13 ವಾಹನಗಳ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.5- ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿ ಸುಮಾರು ಐದು ಲಕ್ಷ ರೂ. ಬೆಲೆಬಾಳುವ 13 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆ.31ರಂದು ಸುಮಾರು 11 ಗಂಟೆ ಸಮಯದಲ್ಲಿ ಬಸವೇಶ್ವರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮೋದಿ ಆಸ್ಪತ್ರೆ ಎದುರು ನಿಲ್ಲಿಸಿದ್ದ ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಬೈಕ್ ಅನ್ನು ಕಳ್ಳರು ಕಲ್ಲಾ ಯ್ದಿದ್ದಾರೆ ಎಂದು ಮಾಲೀಕರು ಬಸವೇಶ್ವರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯು ಮುಳಬಾಗಿಲು ನಿವಾಸಿಯಾಗಿದ್ದು, ನಗರಕ್ಕೆ ಬಂದು ಅಂಗಡಿ, ಒಂಟಿ ಮನೆಗಳ ಮುಂದೆ ನಿಲ್ಲಿಸಿರುತ್ತಿದ್ದ ಬೈಕ್‍ಗಳನ್ನು ಕಳವು ಮಾಡುತ್ತಿದ್ದ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

ಬಸವೇಶ್ವರನಗರ, ಬಾಣಸವಾಡಿ, ಕೆಜಿ ಹಳ್ಳಿ, ಭಾರತಿನಗರ, ಕೋಲಾರ ಜಿಲ್ಲಾ , ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿಯು ಬಾಯ್ಬಿಟ್ಟಿದ್ದಾನೆ. ಆರೋಪಿಯು ಕಳವು ಮಾಡಿದ್ದ 13 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Facebook Comments