13,000 ಕೋಟಿ ರೂ.ಕಪ್ಪುಹಣದಲ್ಲಿ ಪ್ರಭಾವಿಗಳ ಪಾಲು : ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮಹೇಶ್ ಶಾ

ಈ ಸುದ್ದಿಯನ್ನು ಶೇರ್ ಮಾಡಿ

Mahesh-Shah

ನವದೆಹಲಿ/ಅಹಮದಾಬಾದ್, ಡಿ. 4-ತನ್ನ ಬಳಿ ಇದ್ದ 13,000 ಕೋಟಿ ರೂ.ಗಳ ಕಪ್ಪು ಹಣ ಇದೆ ಎಂದು ಘೋಷಿಸಿಕೊಂಡು ಸರ್ಕಾರಕ್ಕೆ ತೆರಿಗೆ ಕಟ್ಟದೇ ಕೈಕೊಟ್ಟು ನಾಪತ್ತೆಯಾಗಿ ಈಗ ಪ್ರತ್ಯಕ್ಷರಾಗಿರುವ ಗುಜರಾತ್ ಉದ್ಯಮಿ ಮಹೇಶ್ ಶಾ, ಇದರಲ್ಲಿ ಅತ್ಯಂತ ಪ್ರಭಾವಿಗಳು ಮತ್ತು ಉನ್ನತಾಧಿಕಾರಿಗಳು ಷಾಮೀಲಾಗಿದ್ದಾರೆ ಎಂಬ ಸ್ಫೋಟಕ ಮಾಹಿತಿ ನೀಡಿದ್ದಾನೆ.
ಕೆಲವರು ಕಮಿಷನ್ ಆಸೆ ಹುಟ್ಟಿಸಿದ್ದರಿಂದ ತಾವು ಕಪ್ಪು ಹಣವನ್ನು ಘೋಷಿಸಿದ್ದಾಗಿ ಶನಿವಾರ ಮಾಧ್ಯಮದ ಮುಂದೆ ಮಹೇಶ್ ಹೇಳಿದ್ದನು. ಈ ರೀತಿ ಆಮಿಷವೊಡ್ಡಿದವರ ಹೆಸರು ಮತ್ತು ವಿವರಗಳನ್ನು ಆದಾಯ ತೆರಿಗೆ ಅಧಿಕಾರಿಗಳ ಎದುರು ಬಹಿರಂಗಗೊಳಿಸುವುದಾಗಿ ಹೇಳಿದ್ದ. ಸ್ಥಳೀಯ ವಾರ್ತಾ ವಾಹಿನಿಯೊಂದರಲ್ಲಿ ಈ ರೀತಿ ಹೇಳಿಕೆ ನೀಡುತ್ತಿದ್ದ ವೇಳೆಯಲ್ಲೇ ಪೊಲೀಸರು ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಟಿವಿ ಚಾನೆಲ್ ನ್ಯೂಸ್ ಸ್ಟುಡಿಯೋದಲ್ಲೇ ಶಾನನ್ನು ವಶಕ್ಕೆ ಪಡೆದರು.

ಈ ಸಂದರ್ಭದಲ್ಲಿ ಕಪ್ಪು ಹಣ ವೃತ್ತಾಂತದ ಹಿಂದಿರುವ ಅತ್ಯಂತ ಪ್ರಭಾವಿ ಮತ್ತು ಉನ್ನತಾಧಿಕಾರಿಗಳು ಷಾಮೀಲಾಗಿದ್ದು, ಅವರ ಹೆಸರು ಮತ್ತು ವಿವರಗಳನ್ನು ವಿವರಗಳನ್ನು ಪೊಲೀಸರು ಮತ್ತು ಅದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮುಂದೆ ಆತ ಬಾಯ್ಬಿಟ್ಟಿದ್ದಾನೆ. ಈ ಸ್ಫೋಟಕ ಮಾಹಿತಿಯನ್ನು ಗೋಪ್ಯವಾಗಿಟ್ಟಿರುವ ಅಧಿಕಾರಿಗಳು ಆತ ನೀಡಿದ ಹೇಳಿಕೆ ಆಧಾರದ ಮೇಲೆ ತನಿಖೆಯನ್ನು ತೀವ್ರಗೊಳಿಸಿದ್ದಾರೆ.  ನಂತರ ಮಹೇಶ್ ಶಾನನ್ನು ಗೋಪ್ಯ ಸ್ಥಳಕ್ಕೆ ಕರೆದೊಯ್ಡು ವಿಚಾರಣೆಗೆ ಒಳಪಡಿಸಿದರು. ಕಪ್ಪು ಹಣವನ್ನು ಸ್ವಪ್ರೇರಿತವಾಗಿ ಘೋಷಿಸಿಕೊಳ್ಳಲು ಸರ್ಕಾರ ನೀಡಿದ್ದ ನಾಲ್ಕು ತಿಂಗಳ ಗಡುವು ಸೆಪ್ಡೆಂಬರ್ 30ಕ್ಕೆ ಮುಗಿದಿತ್ತು. ತನ್ನ ಬಳಿ 13 ಸಾವಿರ ಕೋಟಿ ರೂ.ಗಳ ಕಾಳಧನ ಇದೆ ಎಂದು ಶಾ ಘೋಷಿಸಿಕೊಂಡಿದ್ದ. ಅದರಂತೆ ಆತ ಶೇ.45ರಷ್ಟು ದಂಡವನ್ನು ಕಂತುಗಳಲ್ಲಿ ಪಾವತಿಸಬೇಕಿತ್ತು. ಅದರಲ್ಲಿ ಘೋಷಿಸಿಕೊಂಡ ಮೊತ್ತದ ಶೇ.25ರಷ್ಟು ತೆರಿಗೆಯನ್ನು ನ.30ರೊಳಗೆ ಕಟ್ಟಬೇಕಿತ್ತು. ಆದರೆ, ಆ ಬಳಿಕ ಆತ ನಾಪತ್ತೆಯಾಗಿದ್ದ. ಇದು ದೇಶದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿತ್ತು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin