ಕೊರೋನಾ ಚಿಕಿತ್ಸೆಗಾಗಿ ಕರ್ನಾಟಕದಲ್ಲಿ 14 ಹೊಸ ಆಸ್ಪತ್ರೆಗಳ ಆರಂಭಕ್ಕೆ ಕೇಂದ್ರ ಅನುಮತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.10- ದಿನೇ ದಿನೇ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ರಾಜ್ಯದಲ್ಲಿ ಹೊಸದಾಗಿ 14 ಆಸ್ಪತ್ರೆಗಳನ್ನುಆರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಮೂಲಕ 5665 ಹಾಸಿಗೆಗಳು, 801 ತೀವ್ರ ನಿಗಾ ಘಟಕಗಳು ಮತ್ತು 372 ವೆಂಟಿಲೆಟರ್ ಗಳು ಲಭ್ಯವಾಗಿವೆ.

ರಾಮನಗರದಲ್ಲಿ ಕಂದಾಯ ಭವನವನ್ನೇ 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದ್ದು, 16 ತೀವ್ರ ನಿಗಾ ಘಟಕಗಳನ್ನು ಸ್ಥಾಪಿಸಲಾಗಿದೆ, 3 ವೆಂಟಿಲೆಟರ್ ಗಳನ್ನು ಅಳವಡಿಸಲಾಗಿದೆ. ಉಳಿದಂತೆ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ 275 ಹಾಸಿಗೆಗಳ, 43 ತೀವ್ರನಿಗಾ ಘಟಕಗಳ ಮತ್ತು 2 ವೆಂಟಿಲೆಟರ್ ಗಳ ಚಿಕಿತ್ಸಾ ಕೇಂದ್ರ ಆರಂಭಿಸಲಾಗಿದೆ. ಚಾಮರಾಜನಗರದ ವೈದ್ಯಕೀಯ ವಿದ್ಯಾಲಯದಲ್ಲಿ 100 ಹಾಸಿಗೆಗಳ, 50 ತೀವ್ರ ನಿಗಾ ಘಟಕಗಳ ಮತ್ತು ಏಳು ವೆಂಟಿಲೆಟರ್ ಗಳನ್ನುಆರಂಭಿಸಲಾಗಿದೆ.

ಚಿಕ್ಕಬಳ್ಳಾಪುರದ ಜಿಲ್ಲಾಸ್ಪತ್ರೆಯಲ್ಲಿ 100 ಹಾಸಿಗೆಗಳ, ೇಳು ತೀವ್ರ ನಿಗಾಘಟಕಗಳ, ಎರಡು ವೆಂಟಿಲೆಟರ್ ಗಳನ್ನು, ಚಿಕ್ಕಮಗಳೂರಿನಲ್ಲಿ 250 ಹಾಸಿಗೆಗಳ ಮೂರು ತೀವ್ರ ನಿಗಾ ಘಟಕಗಳ, ಮೂರು ವೆಂಟಿಲೆಟರ್ ಗಳ ಆಸ್ಪತ್ರೆಯನ್ನು ಆರಂಭಿಸಲಾಗಿದೆ. ಆರೋಗ್ಯ ಸಚಿವ ಶ್ರೀರಾಮುಲು ಪ್ರತಿನಿಧಿಸುವ ಚಿತ್ರದುರ್ಗ ಜಿಲ್ಲೆಯಲ್ಲಿ 16 ಹಾಸಿಗೆಗಳ, 18 ತೀವ್ರ ನಿಗಾ ಘಟಕಗಳ, 9 ವೆಂಟಿಲೆಟರ್ ಗಳ ಆಸ್ಪತ್ರೆ ನಿರ್ಮಿಸಲಾಗಿದೆ.

ದಾವಣಗೆರೆಯಲ್ಲಿ 250 ಹಾಸಿಗೆಗಳ, 50 ತೀವ್ರ ನಿಗಾಘಟಕಗಳ ಹಾಗೂ 7 ವೆಂಟಿಲೆಟರ್ ಗಳ, ಹಾವೇರಿಯಲ್ಲಿ 50 ಹಾಸಿಗೆಗಳ 10 ತೀವ್ರ ನಿಗಾಘಟಕಗಳ, 1 ವೆಂಟಿಲೆಟರ್ ನ, ಕೋಲಾರದಲ್ಲಿ ಎಸ್ ಎನ್ ಆರ್ ಜಿಲ್ಲಾಸ್ಪತ್ರೆಯಲ್ಲಿ 22 ಹಾಸಿಗೆಗಳ, 40 ತೀವ್ರ ನಿಗಾಘಟಕಗಳ, 2 ವೆಂಟಿಲೆಟರ್ ಗಳ ಆಸ್ಪತ್ರೆಯನ್ನು ಆರಂಭಿಸಲಾಗಿದೆ. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ 100 ಹಾಸಿಗೆಗಳ, ಆರು ತೀವ್ರ ನಿಗಾ ಘಟಕಗಳ, ಎಂಟು ವೆಂಟಿಲೆಟರ್ ಗಳ ಆಸ್ಪತ್ರೆ ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ.

ಉಡುಪಿಯ ಟಿಎಂಪೈ ಆಸ್ಪತ್ರೆಯಲ್ಲಿ 80 ಹಾಸಿಗೆಗಳ, 20 ತೀವ್ರ ನಿಗಾ ಘಟಕಗಳ, 10 ವೆಂಟಿಲೆಟರ್ ಗಳ, ಉತ್ತರ ಕನ್ನಡ ಜಿಲ್ಲೆಯ ಕಾರವಾರದ ವೈದ್ಯಕೀಯ ವಿದ್ಯಾಲಯದಲ್ಲಿ 200 ಹಾಸಿಗೆಗಳ, 25 ತೀವ್ರ ನಿಗಾಘಟಕ ಮತ್ತು ಮೂರು ವೆಂಟಿಲೆಟರ್ ಗಳ, ವಿಜಯಪುರದಲ್ಲಿಲ 20 ಹಾಸಿಗೆ, 10 ತೀವ್ರ ನಿಗಾ ‍‍ಘಟಕ ಹಾಗೂ 3 ವೆಂಟಿಲೆಟರ್, ಯಾದಗಿರಿಯಲ್ಲಿ ಹೊಸದಾಗಿ ಸ್ಥಾಪಿಸಲಾಗಿರುವ ಜಿಲ್ಲಾಸ್ಪತ್ರೆಯಲ್ಲಿ 90 ಹಾಸಿಗೆಗಳ, 9 ತೀವ್ರ ನಿಗಾ ಘಟಕಗಳ, 4 ವೆಂಟಿಲೆಟರ್ ಗಳ ಆಸ್ಪತ್ರೆಗಳನ್ನು ಸ್ಥಾಪಿಸಾಗಿದೆ.

ಈ ಮೂಲಕ ರಾಜ್ಯದಲ್ಲಿ ಹೊಸದಾಗಿ 5665 ಹಾಸಿಗೆಗಳು, 801 ತೀವ್ರ ನಿಗಾಘಟಕಗಳು ಮತ್ತು 372 ವೆಂಟಿಲೆಟರ್ ಗಳು ಕೊರೊನಾ ಸೋಂಕಿತರ ಚಿಕಿತ್ಸೆಗೆ ಲಭ್ಯವಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ಪಷ್ಟ ಪಡಿಸಿದೆ.

Facebook Comments

Sri Raghav

Admin