145 ವರ್ಷಗಳಷ್ಟು ಹಳೆಯ ಲೋಹ ಕಾರ್ಖಾನೆಯಲ್ಲಿ ಸ್ಫೋಟ : ಇಬ್ಬರ ಸಾವು
ಕೊಲ್ಕತಾ, ಮಾ.14-ಪಶ್ಚಿಮ ಬಂಗಾಳದ ನಾರ್ತ್ 24 ಪರಗಣ ಜಿಲ್ಲೆಯ ಇಶಾಪೋರ್ನ 145 ವರ್ಷಗಳಷ್ಟು ಹಳೆಯದಾದ ಲೋಹ ಮತ್ತು ಉಕ್ಕು ಕಾರ್ಖಾನೆಯಲ್ಲಿ (ಎಂಎಸ್ಎಫ್) ಸಂಭವಿಸಿದ ಭಾರೀ ಸ್ಫೋಟ ಇಬ್ಬರನ್ನು ಬಲಿ ತೆಗೆದುಕೊಂಡಿದೆ. ಈ ದುರ್ಘಟನೆಯಲ್ಲಿ ಒಂಭತ್ತು ಮಂದಿ ತೀವ್ರ ಗಾಯಗೊಂಡಿದ್ದಾರೆ. ಕಾರ್ಖಾನೆಯಲ್ಲಿ ಭಾನುವಾರ ರಾತ್ರಿ 20 ಟನ್ ಸಾಮಥ್ರ್ಯದ ಕುಲುಮೆಯಲ್ಲಿ ಈ ಸ್ಫೋಟ ಸಂಭವಿಸಿದ್ದು, ಫಲ್ಗುಣಿ ಬ್ಯಾನರ್ಜಿ ಮತ್ತು ಬಬ್ಲು ಮಜುಮ್ದಾರ್ ಮ್ಮತಪಟ್ಟಿದ್ದಾರೆ. ದಹನಶೀಲ ಅನಿಲದಿಂದ ಈ ಸ್ಫೋಟ ಸಂಭವಿಸಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ರಕ್ಷಣಾ ಸಚಿವಾಲಯದ ಶಸ್ತ್ರಾಸ್ತ್ರ ಕೈಗಾರಿಕ ಮಂಡಳಿ (ಒಎಫ್ಬಿ) ವ್ಯಾಪ್ತಿಗೆ ಒಳಪಡುವ ಕೈಗಾರಿಕೆಗಳಲ್ಲಿ ಎಂಎಫ್ಸಿ ಸಹ ಒಂದು. ಮಿಲಿಟರಿ ಹಾರ್ಡ್ವೇರ್ಗಾಗಿ ಕಬ್ಬಿಣ, ಉಕ್ಕು, ಮತ್ತು ಇತರ ಲೋಹಗಳನ್ನು ಈ ಕೈಗಾರಿಕೆ ಉತ್ಪಾದಿಸುತ್ತದೆ. 1872ರಲ್ಲಿ ಈ ಕಾರ್ಖಾನೆಯನ್ನು ಸ್ಥಾಪಿಸಲಾಗಿದೆ.
ಈ ಘಟನೆ ಬಗ್ಗೆ ಉನ್ನತಮಟ್ಟದ ತನಿಖೆಗೆ ಆದೇಶಿಲಾಗಿದೆ ಎಂದು ರಕ್ಷಣಾ ಇಲಾಖೆ ವಕ್ತಾರ ವಿಂಗ್ ಕಮ್ಯಾಂಡರ್ ಎಸ್.ಎಸ್. ಬಿರ್ದಿ ತಿಳಿಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS