145 ವರ್ಷ ವಯಸ್ಸಿನ ವಿಶ್ವದ ಹಿರಿಯಜ್ಜ

ಈ ಸುದ್ದಿಯನ್ನು ಶೇರ್ ಮಾಡಿ

145-Year

ಲಂಡನ್,ಆ.29– ಬರೋಬ್ಬರಿ 145 ವರ್ಷ ವಯಸ್ಸಿನ ಮಭಾ ಗೊಥೊ ಈಗ ವಿಶ್ವದ ಹಿರಿಯಜ್ಜ ಎಂಬ ಖ್ಯಾತಿ ಪಡೆಯಲಿದ್ದಾರೆ. ಇಂಡೋನೇಷ್ಯಾದ ಅಧಿಕೃತ ದಾಖಲೆಗಳ ಪ್ರಕಾರ ಗೊಥೊ ಜಗತ್ತಿನ ಅತಿ ಹಿರಿಯ ವ್ಯಕ್ತಿ.  ಕೇಂದ್ರ ಜಾವಾದ ಸ್ರಗನ್ನಲ್ಲಿ 1870ರ ಡಿ.31ರಂದು ಜನಿಸಿದ ಗೊಥೊ ಅವರಿಗೆ 10 ಸಹೋದರ-ಸಹೋದರಿಯರು ಹಾಗೂ ನಾಲ್ಕು ಪತ್ನಿಯರು ಇದ್ದಾರೆ. ಮತ್ತೊಂದು ವಿಶೇಷ ಸಂಗತಿ ಎಂದರೆ ಈ ಹಿರಿಯಜ್ಜ ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಅಲ್ಲದೇ ಮರಿ ಮೊಮ್ಮಕ್ಕಳ ಮಕ್ಕಳನ್ನೂ ಕಂಡಿದ್ದಾರೆ.  ಜಗತ್ತಿನ ಹಿರಿಯಜ್ಜನ ಕೊನೆಯ ಆಸೆ ತಾನು ಸಾಯುವುದಾಗಿದೆ, ಹೀಗಾಗಿಯೇ 20 ವರ್ಷಗಳ ಹಿಂದೆಯೇ ಇವರು ತಮ್ಮ ಗೋರಿಯನ್ನೂ ಸಿದ್ಧಮಾಡಿದ್ದಾರೆ. ನನ್ನ ಮೊಮ್ಮಕ್ಕಳು ಎಲ್ಲರೂ ಸ್ವತಂತ್ರರಾಗಿದ್ದಾರೆ. ನನಗೀಗ ಬೇಕಾಗಿರುವುದು ಸಾವಷ್ಟೇ ಎಂದು ಗೊಥೊ ಹೇಳಿದ್ದಾರೆ.

ಇಂಡೋನೇಷ್ಯಾದ ದಾಖಲೆಗಳು ಸತ್ಯ ಎಂದು ದೃಢೀಕರಣವಾದರೆ ಗೊಥೊ ಅವರನ್ನು ಅಧಿಕೃತವಾಗಿ ವಿಶ್ವದ ಹಿರಿಯಜ್ಜ ಎಂದು ಘೋಷಿಸಲಾಗುತ್ತದೆ. ಈವರೆಗೂ ಫ್ರಾನ್ಸ್ನ 122 ವರ್ಷದ ಜಿಯಾನ್ನೆ ಕಾಲ್ಮೆಂಟ್ ಅವರು ಈ ಖ್ಯಾತಿ ಪಡೆದಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin