15ಕ್ಕೆ ಶಿಕ್ಷಣ ಸಂಘಟನೆಗಳ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

8
ಬೆಳಗಾವಿ,ಫೆ.13- ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಸರಕಾರ ಗಮನ ಹರಿಸದ್ದರಿಂದ ತಮಗೆ ಹೋರಾಟ ಅನಿವಾರ್ಯವಾಗಿದ್ದು, ಇದೇ 15ರಂದು ನಗರದ ಲಿಂಗರಾಜ ಕಾಲೇಜ್ ಮೈದಾನದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ. ಸರಕಾರ ಮತ್ತು ಶಿಕ್ಷಣ ನಿರ್ದೇಶನಾಲಯಗಳಲ್ಲಿ ಸಮಸ್ಯೆಗಳು ಬಗೆಹರಿಯುತ್ತಿಲ್ಲ ಎಂದು ಎಸ್.ಎಸ್. ಮಠದ ಅಸಮಾಧಾನ ವ್ಯಕ್ತಪಡಿಸಿದರು.ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳ ನಡುವಿನ ಮಲತಾಯಿ ಧೋರಣೆ ನಿಲ್ಲಿಸಬೇಕು. ಸರಕಾರಿ ಗುತ್ತಿಗೆ ಶಿಕ್ಷಕರ ಸವಲತ್ತುಗಳನ್ನು ಹಿಂಪಡೆಯಬಾರದು, ಮಾನ್ಯತೆ ನವೀಕರಣ ಸರಳಿಕರಣಗೊಳಿಸಬೇಕು ಎಂದು ಹೇಳಿದರು.

1995ರ ನಂತರದ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಕೊಡುವುದು, ಹಳೆ ಪಿಂಚಣಿ ಪದ್ಧತಿಯನ್ನು ಮುಂದುವರೆಸಿ, ಶಿಕ್ಷಕ ಮತ್ತು ವಿದ್ಯಾರ್ಥಿಗಳ ಅನುಪಾತವನ್ನು ಸಿಬಿಎಸ್‍ಸಿ , ಐಸಿಎಸ್‍ಐ ಮಾದರಿಯಲ್ಲಿ ನಿಗದಿಗೊಳಿಸಿ, ವೇತನ ತಾರತಮ್ಯ ನಿರ್ಮೂಲನೆ ಮಾಡಿ ವೇತನ ಆಯೋಗ ಸೃಷ್ಟಿಸಿ ಎಂಬ ಇನ್ನಿತರ ಬೇಡಿಕೆಗಳನ್ನು ಮಂಡಿಸಿ ಹಾಗೂ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಹೋರಾಟದ ಅಗತ್ಯತೆ ಮೊದಲಿನಿಂದ ಕಂಡುಬಂದಿದೆ ಎಂದು ಅವರು ತಿಳಿಸಿದರು.ಪ್ರತಿಭಟನಾ ಸಭೆಯ ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುತ್ತಿದ್ದು ಡಾ. ಪ್ರಭಾಕರ ಕೋರೆ, ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ, ಹುಕ್ಕೇರಿ ಶ್ರೀ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮೀಜಿ, ಶಿಕ್ಷಣ ತಜ್ಞ ನಿರಂಜನಾರಾಧ್ಯ, ಎಂಎಲ್‍ಸಿ ಹನುಮಂತ ನಿರಾಣಿ, ಮಹಾಂತೇಷ ಕವಟಗಿಮಠ ಇತರರು ಭಾಗವಹಿಸಲಿದ್ದಾರೆ ಎಂದರು.ಪತ್ರಿಕಾಗೋಷ್ಟಿಯಲ್ಲಿ ಸಲೀಮ ಕಿತ್ತೂರ, ಎಂ.ಎ. ಕೋರಿಶೆಟ್ಟಿ, ರಾಮು ಗುಗವಾಡ, ಕೆ.ಬಿ. ಹಿರೇಮಠ, ಎಸ್.ಪಿ. ಮುರಚೆ, ಬಿ.ಪಿ. ಲಮಾಣಿ, ಎಸ್.ಸಿ. ಪಾಟೀಲ, ಡಿ.ಪಿ. ಬೆಳಗಾಂವಕರ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin