15 ಕುರಿಗಳನ್ನು ತಿಂದುತೇಗಿದ ಚಿರತೆಗಳು

ಈ ಸುದ್ದಿಯನ್ನು ಶೇರ್ ಮಾಡಿ

cheee

ಕನಕಪುರ,ಆ.26-ತಾಲ್ಲೂಕಿನ ಯಲಚವಾಡಿ ಗ್ರಾಮಕ್ಕೆ ನುಗ್ಗಿದ ಚಿರತೆಗಳು ಕುರಿಗಳ ಮೇಲೆ ದಾಳಿ ಮಾಡಿ ಸುಮಾರು 15 ಕುರಿಗಳನ್ನು ತಿಂದಿರುವ ಘಟನೆ ಗ್ರಾಮದ ಜನತೆಯನ್ನು ಭಯಭೀತಿಗೊಳಿಸಿದೆ.  ಕುರಿ ಸಾಕಾಣಿಕೆದಾರ ಶೌಕತ್ ಎಂಬುವರು 150ಕ್ಕೂ ಹೆಚ್ಚು ಕುರಿಗಳನ್ನು ಸಾಕಿದ್ದರು. ಮಧ್ಯರಾತ್ರಿ ಚಿರತೆಗಳು ಗ್ರಾಮದೊಳಗೆ ನುಗ್ಗಿ ಕೊಟ್ಟಿಗೆಯಲ್ಲಿದ್ದ ಕುರಿಗಳ ಪೈಕಿ 15 ಕುರಿಗಳನ್ನು ತಿಂದು ಪರಾರಿಯಾಗಿವೆ.  ಮುಂಜಾನೆ ಈ ವಿಷಯ ಬೆಳಕಿಗೆ ಬಂದಿದ್ದು , ತಕ್ಷಣ ಶೌಕತ್ ಅವರು ಗ್ರಾಮಸ್ಥರೊಂದಿಗೆ ಸೇರಿ ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ವಲಯ ಅರಣ್ಯಾಧಿಕಾರಿ ಮಹಮ್ಮದ್ ಮನ್ಸೂರ್, ಪಶು ಇಲಾಖೆ ವೈದ್ಯರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಪರಿಹಾರಕ್ಕೆ ಒತ್ತಾಯ:  ಚಿರತೆ ಹಾವಳಿಯಿಂದ ಕುರಿಗಳನ್ನು ಕಳೆದುಕೊಂಡಿರುವ ಮಾಲೀಕರಿಗೆ ಪರಿಹಾರ ಕಲ್ಪಿಸಬೇಕೆಂದು ಜಿಪಂ ಮಾಜಿ ಸದಸ್ಯೆ ಗೀತಾ ಈಶ್ವರ್ ಒತ್ತಾಯಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin